ಮಂಗಳವಾರ, ನವೆಂಬರ್ 24, 2020
22 °C

ಉದ್ದೀಪನ ಮದ್ದು ಸೇವನೆ: ಎಎಫ್‌ಐ ಎಚ್ಚರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಗುರುಗ್ರಾಮ: ಕೋವಿಡ್‌–19 ಪಿಡುಗಿನಿಂದ ಉಂಟಾಗಿರುವ ಬಿಡುವಿನ ಲಾಭ ಪಡೆದು ನಿಷೇಧಿತ ಮದ್ದು ಸೇವನೆಯಂತಹ ಕಾರ್ಯಗಳಿಗೆ ಕೈ ಹಾಕದಿರಿ ಎಂದು ಅಥ್ಲೀಟ್‌ಗಳು ಹಾಗೂ ಕೋಚ್‌ಗಳಿಗೆ ಭಾರತ ಅಥ್ಲೆಟಿಕ್ಸ್ ಫೆಡರೇಷನ್‌(ಎಎಫ್‌ಐ), ಶನಿವಾರ ಎಚ್ಚರಿಕೆ ನೀಡಿದೆ. ಡೋಪಿಂಗ್‌ ಅಡೆತಡೆಯಿಲ್ಲದೆ ಮುಂದುವರಿದರೆ ಇಡೀ ದೇಶವೇ ನಿಷೇಧಕ್ಕೆ ಒಳಗಾಗಬಹುದು ಎಂದು ಫೆಡರೇಷನ್‌ ಆತಂಕ ವ್ಯಕ್ತಪಡಿಸಿದೆ.

‘ರಾಷ್ಟ್ರೀಯ ಶಿಬಿರದಿಂದ ಹೊರಗಿರುವ ಅಥ್ಲೀಟ್‌ಗಳು ಉದ್ದೀಪನ ಮದ್ದು ಸೇವಿಸುವ ಸಾಧ್ಯತೆ ಹೆಚ್ಚಿದೆ. ರಾಜ್ಯ ಮತ್ತು ಜಿಲ್ಲಾ ಮಟ್ಟದ ಕೋಚ್‌ಗಳೂ ಇದರಲ್ಲಿ ಭಾಗಿಯಾಬಹುದು‘ ಎಂಬುದು ಎಎಫ್‌ಐ ಅಧ್ಯಕ್ಷ ಆದಿಲ್ ಸುಮರಿವಾಲಾ ಅವರ ಅಭಿಪ್ರಾಯ.

ಶನಿವಾರ ಇಲ್ಲಿ ನಡೆದ ಎಎಫ್‌ಐನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

‘ಕೋವಿಡ್‌ ಹಾವಳಿಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕ (ನಾಡಾ) ಈಗ ಪರೀಕ್ಷೆಗಳನ್ನು ನಡೆಸುತ್ತಿಲ್ಲ. ಇಂಥ ಸಮಯದಲ್ಲಿ ಅಥ್ಲೀಟ್‌ ಹಾಗೂ ಕೋಚ್‌ಗಳು ತಪ್ಪು ದಾರಿ ತುಳಿಯುವ ಸಾಧ್ಯತೆ ಇದೆ. ಅಥ್ಲೀಟ್‌ಗಳು ತೆಗೆದುಕೊಳ್ಳಬಹುದಾದ ನಿಷೇಧಿತ ದ್ರವ್ಯಗಳ ಅಂಶ ಒಂದು ವರ್ಷದ ಕಾಲ ಶರೀರದೊಳಗೆ ಉಳಿಯಬಲ್ಲುದು. ಯಾವುದೇ ಸಂದರ್ಭದಲ್ಲಿ ಅವರು ಸಿಕ್ಕಿಬೀಳಬಹುದು. ಭಾರತ ಸದ್ಯ ಉದ್ದೀಪನ ಮದ್ದು ಸೇವನೆ ಪ್ರಕರಣಗಳಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ. ಹೀಗೆ ಮುಂದುವರಿದರೆ ನಮ್ಮ ದೇಶ ಅಂತರರಾಷ್ಟ್ರೀಯ ಮಟ್ಟದಲ್ಲಿ ನಿಷೇಧಕ್ಕೂ ಒಳಗಾಗಬಹುದು‘ ಎಂದು ಸುಮರಿವಾಲಾ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು