ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾರ್ಮುಲಾ ಒನ್‌ ಚಾಲಕರಿಗೆ ಕೊರೊನಾ ಸೋಂಕು ಇಲ್ಲ

Last Updated 4 ಜುಲೈ 2020, 10:47 IST
ಅಕ್ಷರ ಗಾತ್ರ

ಸ್ಪಿಲ್‌ಬರ್ಗ್‌, ಆಸ್ಟ್ರಿಯಾ: ಪ್ರತಿಷ್ಠಿತ ಆಸ್ಟ್ರಿಯನ್‌ ಗ್ರ್ಯಾನ್‌ ಪ್ರಿಫಾರ್ಮುಲಾ ಒನ್‌ ಮೋಟರ್‌ ರೇಸ್‌ನಲ್ಲಿ‌ ಪಾಲ್ಗೊಂಡಿರುವ ಎಲ್ಲಾ ಚಾಲಕರು, ನೆರವು ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಕೊರೊನಾ ಸೋಂಕು ತಗುಲಿಲ್ಲ ಎಂಬುದು ಶನಿವಾರ ದೃಢಪಟ್ಟಿದೆ.

ರೇಸ್‌ ಅನ್ನು ಸುಸೂತ್ರವಾಗಿ ನಡೆಸಲು ನಿರ್ಧರಿಸಿರುವ ಸಂಘಟಕರು ಐದು ದಿನಕ್ಕೊಮ್ಮೆ ಎಲ್ಲಾ ಸ್ಪರ್ಧಿಗಳು ಹಾಗೂ ಸಿಬ್ಬಂದಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲು ತೀರ್ಮಾನಿಸಿದ್ದಾರೆ. ಜೊತೆಗೆರೆಡ್‌ಬುಲ್‌ ಸರ್ಕ್ಯೂಟ್‌ನಲ್ಲಿ ಭಾನುವಾರ ನಡೆಯುವ ರೇಸ್‌ ನೋಡಲು ಪ್ರೇಕ್ಷಕರಿಗೂ ಅವಕಾಶ ನಿರಾಕರಿಸಲಾಗಿದೆ.

‘ಜೂನ್‌ 26ರಿಂದ ಜುಲೈ 2ರ ಅವಧಿಯಲ್ಲಿ ಒಟ್ಟು 4,032 ಮಂದಿಯ ಗಂಟಲು ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಎಲ್ಲರ ವರದಿಯೂ ನೆಗೆಟಿವ್‌ ಆಗಿದೆ’ ಎಂದು ಫಾರ್ಮುಲಾ ಒನ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಶುಕ್ರವಾರ ನಡೆದಿದ್ದ ಎರಡೂ ಸುತ್ತುಗಳ ಅಭ್ಯಾಸಗಳಲ್ಲಿ ಮರ್ಸಿಡೀಸ್‌ ತಂಡದ ಲೂಯಿಸ್‌ ಹ್ಯಾಮಿಲ್ಟನ್‌ ಅವರು ಅತಿ ವೇಗವಾಗಿ ಗುರಿ ಕ್ರಮಿಸಿ ಗಮನ ಸೆಳೆದಿದ್ದರು.

ಮಾರ್ಚ್‌ನಲ್ಲಿ ನಿಗದಿಯಾಗಿದ್ದ ಆಸ್ಟ್ರೇಲಿಯಾ ಗ್ರ್ಯಾನ್‌ ಪ್ರಿ, ಈ ಋತುವಿನ ಮೊದಲ ರೇಸ್‌ ಆಗಿತ್ತು. ಕೊರೊನಾ ಬಿಕ್ಕಟ್ಟಿನ ಕಾರಣದಿಂದಾಗಿ ಆ ರೇಸ್‌ ಅನ್ನು ರದ್ದು ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT