ಸೋಮವಾರ, ಆಗಸ್ಟ್ 2, 2021
25 °C

ಗವರ್ನರ್ಸ್‌ ಕಪ್ ಬಾಕ್ಸಿಂಗ್: ಅಮಿತ್ ಫಂಘಲ್‌ಗೆ ಕಂಚಿನ ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಭಾರತದ ಅಮಿತ್ ಫಂಘಲ್ ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆದ ಗವರ್ನರ್ಸ್‌ ಕಪ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕಕ್ಕೆ ಸಮಾಧಾನಪಟ್ಟುಕೊಂಡಿದ್ದಾರೆ.

52 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು ಸೆಮಿಫೈನಲ್‌ನಲ್ಲಿ ವಿಶ್ವ ಚಾಂಪಿಯನ್ ಶಕೊಬಿದಿನ್ ಜೈರೊವ್‌ಗೆ 0–5ರಲ್ಲಿ ಮಣಿದರು. ಅಮಿತ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ. ಜೈರೊವ್‌ ಕೂಡ ಈಗಾಗಲೇ ಒಲಿಂಪಿಕ್ಸ್‌ಗೆ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. 2019ರ ವಿಶ್ವ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲೂ ಜೈರೊವ್‌ ವಿರುದ್ಧ ಅಮಿತ್ ಸೋತಿದ್ದರು.

ಗವರ್ನರ್ಸ್ ಕಪ್‌ ಟೂರ್ನಿಯಲ್ಲಿ ಫೈನಲ್ ಪದಕ ಸುತ್ತಿಗೆ ಪ್ರವೇಶಿಸಿದ ಭಾರತದ ಏಕೈಕ ಬಾಕ್ಸರ್ ಅಮಿತ್ ಫಂಘಲ್. 75 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಆಶಿಶ್ ಕುಮಾರ್‌ ಮತ್ತು 81 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಸುಮಿತ್ ಸಾಂಗ್ವಾನ್ ಆರಂಭದಲ್ಲೇ ಹೊರಬಿದ್ದಿದ್ದರು.

ಹರಿಯಾಣದ ಅಮಿತ್‌ ಇದೇ ಮೊದಲ ಬಾರಿ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದು ಪದಕ ಗೆಲ್ಲುವ ನೆಚ್ಚಿನ ಬಾಕ್ಸರ್ ಎನಿಸಿದ್ದಾರೆ. 23 ವರ್ಷದ ಅಮಿತ್ ಮೂರು ವರ್ಷಗಳಲ್ಲಿ ಅತ್ಯುತ್ತಮ ಸಾಮರ್ಥ್ಯ ತೋರುತ್ತಿದ್ದು ಏಷ್ಯನ್ ಗೇಮ್ಸ್‌ ಮತ್ತು ಏಷ್ಯನ್ ಚಾಂಪಿಯನ್‌ಷಿಪ್‌ಗಳಲ್ಲಿ ಪದಕ ಗೆದ್ದುಕೊಂಡಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ಗೇರಿದ ಭಾರತದ ಮೊದಲ ಬಾಕ್ಸರ್ ಆಗಿದ್ದಾರೆ ಅವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು