ಬುಧವಾರ, ಜೂನ್ 23, 2021
23 °C

ಟಿ.ಟಿ: ರಾಜ್ಯದ ಅನರ್ಘ್ಯಾಗೆ ಕಂಚಿನ ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕದ ಅನರ್ಘ್ಯಾ ಮಂಜುನಾಥ್‌, ಹರಿಯಾಣದ ಸೋನೆಪತ್‌ನಲ್ಲಿ ನಡೆದ ರಾಷ್ಟ್ರೀಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ (ಉತ್ತರ ವಲಯ) ಕಂಚಿನ ಪದಕ ಗೆದ್ದಿದ್ದಾರೆ.

ಜೂನಿಯರ್‌ ಬಾಲಕಿಯರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಅನರ್ಘ್ಯಾ 0–4 ಗೇಮ್‌ಗಳಿಂದ ಮಧ್ಯಪ್ರದೇಶದ ಅನುಷಾ ಕುಟುಂಬಲೆ ಎದುರು ಪರಾಭವಗೊಂಡರು.

ಇದಕ್ಕೂ ಮೊದಲು ನಡೆದಿದ್ದ ಕ್ವಾರ್ಟರ್‌ ಫೈನಲ್‌ನಲ್ಲಿ ಅನರ್ಘ್ಯಾ 11–9, 11–5, 14–12, 11–9ರಲ್ಲಿ ನವದೆಹಲಿಯ ಲಕ್ಷಿತಾ ನಾರಂಗ್‌ ಅವರನ್ನು ಮಣಿಸಿದ್ದರು.

ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕದ ಆಟಗಾರ್ತಿ 3–1ರಲ್ಲಿ ಪಶ್ಚಿಮ ಬಂಗಾಳದ ಪೊಯಮಂಟಿ ಬೈಸ್ಯಾ ಅವರನ್ನು ಸೋಲಿಸಿದ್ದರು.

ಈ ವಿಭಾಗದ ಚಿನ್ನದ ಪದಕ ಅನುಷಾ ಕುಟುಂಬಲೆ ಪಾಲಾಯಿತು. ಫೈನಲ್‌ನಲ್ಲಿ ಅವರು 4–1ರಲ್ಲಿ ಎಎಐನ ಸ್ವಸ್ತಿಕಾ ಘೋಷ್‌ ಎದುರು ಗೆದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು