ಮಂಗಳವಾರ, ಜುಲೈ 27, 2021
24 °C

ಆರ್ಚರಿ ವಿಶ್ವಕಪ್: ಪ್ರೀಕ್ವಾರ್ಟರ್‌ಗೆ ಭಾರತ ಮಹಿಳಾ ತಂಡ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪ್ಯಾರಿಸ್‌: ಆರ್ಚರಿ ವಿಶ್ವಕಪ್ ಮೂರನೇ ಹಂತದ ಟೂರ್ನಿಯಲ್ಲಿ ಭಾರತ ಮಹಿಳಾ ರಿಕರ್ವ್‌ ತಂಡವು ಪ್ರೀಕ್ವಾರ್ಟರ್‌ಫೈನಲ್ ತಲುಪಿದೆ. ಅರ್ಹತಾ ಸುತ್ತಿನಲ್ಲಿ ತಂಡವು ಎರಡನೇ ಸ್ಥಾನ ಗಳಿಸಿತು. ಮೆಕ್ಸಿಕೊ ಮೊದಲ ಸ್ಥಾನ ತನ್ನದಾಗಿಸಿಕೊಂಡಿತು. ಭಾನುವಾರ ಒಲಿಂಪಿಕ್ಸ್ ಅರ್ಹತೆ ಗಳಿಸಲು ವಿಫಲವಾಗಿದ್ದ ಭಾರತ ತಂಡವು ಮಂಗಳವಾರ ಇಲ್ಲಿ ಉತ್ತಮ ಸಾಮರ್ಥ್ಯ ತೋರಿತು.

ವಿಶ್ವ ಕ್ರಮಾಂಕದಲ್ಲಿ ಮೂರನೇ ಸ್ಥಾನದಲ್ಲಿರುವ ದೀಪಿಕಾ ಕುಮಾರಿ, ಅಂಕಿತಾ ಭಕತ್ ಹಾಗೂ ಕೋಮಲಿಕಾ ಬಾರಿ ಅವರನ್ನೊಳಗೊಂಡ ತಂಡವು ಭಾನುವಾರ ಒಲಿಂಪಿಕ್ಸ್‌ ಅರ್ಹತಾ ಅಂತಿಮ ಅರ್ಹತಾ ಸುತ್ತಿನಿಂದ ಹೊರಬಿದ್ದಿತ್ತು.

ಭಾನುವಾರ ನಡೆದ ಅರ್ಹತಾ ಪಂದ್ಯದ ಬಳಿಕ ಮೆಕ್ಸಿಕೊ ಹಾಗೂ ಭಾರತ ಅಗ್ರಸ್ಥಾನದಲ್ಲಿದ್ದವು. ಆದರೆ ಕೊಲಂಬಿಯಾ ಎದುರು ಎಡವಿದ ಬಳಿಕ ಭಾರತ ತಂಡ ಎರಡನೇ ಸ್ಥಾನಕ್ಕೆ ಕುಸಿಯತು.

ಅರ್ಹತಾ ಸುತ್ತಿನಲ್ಲಿ ಭಾರತದ ಮಹಿಳೆಯರು 1986 ಪಾಯಿಂಟ್ಸ್ ಕಲೆಹಾಕಿದರು.

ಇಲ್ಲಿ ಎರಡನೇ ಶ್ರೇಯಾಂಕ ಗಳಿಸಿರುವ ಭಾರತದ ಮಹಿಳೆಯರು 16ರ ಘಟ್ಟದ ಪಂದ್ಯದಲ್ಲಿ, ಸ್ಪೇನ್ ಮತ್ತು ಸ್ವೀಡನ್ ಎದುರಿನ ವಿಜೇತರನ್ನು ಎದುರಿಸಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು