ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾ ಕಪ್ ಹಾಕಿ ಟೂರ್ನಿ: ಸವಿತಾ ಬಳಗಕ್ಕೆ ಪ್ರಶಸ್ತಿ ಜಯದ ಕನಸು

ಏಷ್ಯಾ ಕಪ್ ಮಹಿಳಾ ಹಾಕಿ ಇಂದಿನಿಂದ
Last Updated 20 ಜನವರಿ 2022, 19:30 IST
ಅಕ್ಷರ ಗಾತ್ರ

ಮಸ್ಕತ್: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮನಗೆದ್ದು ಬಂದ ಭಾರತದ ಮಹಿಳಾ ಹಾಕಿ ತಂಡವು ಶುಕ್ರವಾರ ಇಲ್ಲಿ ಆರಂಭವಾಗಲಿರುವ ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಪ್ರಶಸ್ತಿ ಜಯದ ವಿಶ್ವಾಸದಲ್ಲಿದೆ.

ಹೋದ ವರ್ಷ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸುವ ಮೂಲಕ ಹಾಕಿ ತಂಡವು ಅಮೋಘ ಸಾಧನೆ ಮಾಡಿತ್ತು. ಇದೇ ಹುಮ್ಮಸ್ಸಿನಲ್ಲಿ ಈಗ ಏಷ್ಯಾ ಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಮಲೇಷ್ಯಾ ತಂಡವನ್ನು ಎದುರಿಸಲಿದೆ. ಗೋಲ್‌ಕೀಪರ್ ಸವಿತಾ ಪೂನಿಯಾ ತಂಡವನ್ನು ಮುನ್ನಡೆಸಲಿದ್ದಾರೆ.

‘ತಂಡದಲ್ಲಿರುವ ನಾವೆಲ್ಲರೂ ಬಹಳ ಸಮಯದಿಂದ ಜೊತೆಗೂಡಿ ಆಡುತ್ತಿದ್ದೇವೆ. ಇದರಿಂದಾಗಿ ಪರಸ್ಪರ ಉತ್ತಮ ಹೊಂದಾಣಿಕೆ ಇದೆ. ಈ ಅನುಭವವು ತಂಡಕ್ಕೆ ಬಲ ತುಂಬಿದೆ’ ಎಂದು ಸವಿತಾ ಹೇಳಿದ್ದಾರೆ.

ಹಾಲಿ ಚಾಂಪಿಯನ್ ಕೂಡ ಆಗಿರುವ ಭಾರತ ತಂಡವು ಈ ಬಾರಿ ಎ ಗುಂಪಿನಲ್ಲಿ ಆಡುತ್ತಿದೆ. ಇದರಲ್ಲಿ ಮಲೇಷ್ಯಾ, ಜಪಾನ್ ಮತ್ತು ಸಿಂಗಪುರ ತಂಡಗಳ ವಿರುದ್ಧ ಆಡಲಿದೆ.

ಇದೇ 26ರಂದು ಸೆಮಿಫೈನಲ್ ಪಂದ್ಯಗಳು ಮತ್ತು 28ರಂದು ಫೈನಲ್ ನಡೆಯಲಿದೆ.

ಹೊಸದಾಗಿ ನೇಮಕವಾಗಿರುವ ಮುಖ್ಯ ಕೋಚ್ ಜೆನೆಕ್ ಶಾಪ್‌ಮ್ಯಾನ್ ಅವರಿಗೂ ಇದು ಮೊದಲ ಟೂರ್ನಿಯಾಗಿದೆ. ಅವರು ಈಹಿಂದೆ ಕೋಚ್ ಆಗಿದ್ದ ಶಾರ್ಡ್ ಮರೈನ್ ಅವರೊಂದಿಗೆ ತಾಂತ್ರಿಕ ಸಲಹೆಗಾರರಾಗಿದ್ದರು.

ಈ ವರ್ಷ ತಂಡವು ಏಷ್ಯಾಕಪ್ ನಂತರ ಕಾಮನ್‌ವೆಲ್ತ್ ಕ್ರೀಡಾಕೂಟ, ಏಷ್ಯನ್ ಕ್ರೀಡಾಕೂಟಗಳಲ್ಲಿ ಆಡಲಿದೆ. 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆಯಲು ತಂಡವು ಪ್ರಯತ್ನಿಸಲಿದೆ.

ಶುಕ್ರವಾರ ನಡೆಯಲಿರುವ ಇನ್ನೊಂದು ಪಂದ್ಯದಲ್ಲಿ ಜಪಾನ್ ಮತ್ತು ಸಿಂಗಪುರ ಮುಖಾಮುಖಿಯಾಗಲಿವೆ. ಬಿ ಗುಂಪಿನಲ್ಲಿ ದಕ್ಷಿಣ ಕೊರಿಯಾ ಮತ್ತು ಇಂಡೊನೇಷ್ಯಾ ಹಾಗೂ ಚೀನಾ ಮತ್ತು ಥಾಯ್ಲೆಂಡ್ ಹಣಾಹಣಿ ನಡೆಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT