ಬುಧವಾರ, ಡಿಸೆಂಬರ್ 7, 2022
23 °C

ಶೂಟಿಂಗ್: ಭಾರತಕ್ಕೆ ಮತ್ತೆ ನಾಲ್ಕು ಚಿನ್ನ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತ ತಂಡದವರು ಕೊರಿಯಾದ ಡೇಗುನಲ್ಲಿ ನಡೆಯುತ್ತಿರುವ ಏಷ್ಯನ್ ಏರ್‌ಗನ್‌ ಚಾಂಪಿಯನ್‌ಷಿಪ್‌ನ ಏರ್‌ ಪಿಸ್ತೂಲ್ ವಿಭಾಗದ ಎಲ್ಲ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡರು.

ಪುರುಷರ 10 ಮೀಟರ್ಸ್ ಏರ್‌ ಪಿಸ್ತೂಲ್‌ನಲ್ಲಿ ಶಿವ ನರ್ವಾಲ್ ಮತ್ತು ಜೂನಿಯರ್ ಪುರುಷರ ವಿಭಾಗದಲ್ಲಿ ಸಾಗರ್ ಡಾಂಗಿ ಅಗ್ರಸ್ಥಾನ ಗಳಿಸಿದರು.

ಸಂದೀಪ್‌ ಬಿಷ್ಣೋಯಿ, ಸಾಹಿಲ್‌ ಮತ್ತು ಅಮಿತ್ ಶರ್ಮಾ ಅವರನ್ನೊಳಗೊಂಡ ಯೂತ್‌ ಪುರುಷರ ತಂಡವು 10 ಮೀ. ಏರ್‌ ಪಿಸ್ತೂಲ್‌ ಫೈನಲ್‌ನಲ್ಲಿ 16–8ರಿಂದ ಕೊರಿಯಾ ತಂಡವನ್ನು ಸೋಲಿಸಿ ಚಿನ್ನಕ್ಕೆ ಮುತ್ತಿಟ್ಟಿತು.

ಇದೇ ಸ್ಪರ್ಧೆಯಲ್ಲಿ ಕನಿಷ್ಕಾ ದಾಗರ್‌, ಯಶವಿ ಜೋಷಿ ಮತ್ತು ಹರ್ನವದೀಪ್ ಕೌರ್ ಅವರಿದ್ದ ಭಾರತದ ಯೂತ್ ಮಹಿಳಾ ತಂಡವೂ ಚಿನ್ನ ಜಯಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು