ಸೋಮವಾರ, ಆಗಸ್ಟ್ 2, 2021
28 °C

ಚೀನಾದಲ್ಲಿ ನಡೆಯಬೇಕಿದ್ದ ಏಷ್ಯನ್‌ ಬೀಚ್‌ ಕ್ರೀಡಾಕೂಟ ಮುಂದಕ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕುವೈತ್‌ ಸಿಟಿ: ಇದೇ ವರ್ಷದ ನವೆಂಬರ್‌ 28ರಿಂದ ಡಿಸೆಂಬರ್‌ 6ರವರೆಗೆ ನಿಗದಿಯಾಗಿದ್ದ ಏಷ್ಯನ್‌ ಬೀಚ್‌ ಕ್ರೀಡಾಕೂಟದ ಆರನೇ ಆವೃತ್ತಿಯನ್ನು ಕೋವಿಡ್‌ ಬಿಕ್ಕಟ್ಟಿನಿಂದಾಗಿ ಮುಂದೂಡಲಾಗಿದೆ.

ಏಷ್ಯಾ ಒಲಿಂಪಿಕ್‌ ಕೌನ್ಸಿಲ್ (ಒಸಿಎ)‌, ಶನಿವಾರ ಈ ನಿರ್ಧಾರ ಕೈಗೊಂಡಿದೆ.

‘ಕೊರೊನಾ ಸೋಂಕಿನ ಉಪಟಳ ಹೆಚ್ಚುತ್ತಲೇ ಇದೆ. ಸ್ಪರ್ಧಿಗಳು ಹಾಗೂ ಇತರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಚೀನಾದ ಸನ್ಯಾದಲ್ಲಿ ನಿಗದಿಯಾಗಿದ್ದ ಕೂಟವನ್ನು ಮುಂದಕ್ಕೆ ಹಾಕಲಾಗಿದೆ. ಒಸಿಎ ಹಾಗೂ ಚೀನಾ ಒಲಿಂಪಿಕ್‌ ಸಮಿತಿಯು ಸುದೀರ್ಘವಾಗಿ ಚರ್ಚಿಸಿಯೇ ಈ ತೀರ್ಮಾನ ಕೈಗೊಂಡಿವೆ’ ಎಂದು ಒಸಿಎ ಪ್ರಕಟಣೆಯಲ್ಲಿ ತಿಳಿಸಿದೆ.

‘ಕೊರೊನಾ ಬಿಕ್ಕಟ್ಟು ಬಗೆಹರಿದ ನಂತರ ಒಸಿಎ, ಚೀನಾ ಒಲಿಂಪಿಕ್‌ ಸಮಿತಿ ಹಾಗೂ ಸನ್ಯಾ ಏಷ್ಯನ್‌ ಬೀಚ್‌ ಕ್ರೀಡಾಕೂಟದ ಸಂಘಟನಾ ಸಮಿತಿಯ ಸದಸ್ಯರು ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಬಳಿಕ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ’ ಎಂದೂ ಹೇಳಲಾಗಿದೆ.

ಐದನೇ ಆವೃತ್ತಿಯ ಕ್ರೀಡಾಕೂಟವು 2016ರಲ್ಲಿ ವಿಯೆಟ್ನಾಂನಲ್ಲಿ ನಡೆದಿತ್ತು. ಚೊಚ್ಚಲ ಆವೃತ್ತಿಯ ಕೂಟಕ್ಕೆ ಇಂಡೊನೇಷ್ಯಾದ ಬಾಲಿ (2008) ಆತಿಥ್ಯ ವಹಿಸಿತ್ತು. 2012ರಲ್ಲಿ ಚೀನಾದ ಹಯಾಂಗ್‌ನಲ್ಲಿ ಕೂಟ ಆಯೋಜನೆಯಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು