ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್‌ ಚೆಸ್‌ ಚಾಂಪಿಯನ್‌ಷಿಪ್‌ಗೆ ತೆರೆ: ಪ್ರಗ್ನಾನಂದ, ನಂದಿದಾಗೆ ಪ್ರಶಸ್ತಿ

Last Updated 3 ನವೆಂಬರ್ 2022, 13:15 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತದ ಗ್ರ್ಯಾಂಡ್‌ಮಾಸ್ಟರ್‌ ಆರ್‌.ಪ್ರಗ್ನಾನಂದ ಮತ್ತು ಪಿ.ವಿ.ನಂದಿದಾ ಅವರು ಗುರುವಾರ ಕೊನೆಗೊಂಡ ಏಷ್ಯನ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಓಪನ್‌ ಹಾಗೂ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್‌ ಆದರು.

ಪ್ರಗ್ನಾನಂದ ಅವರು ಒಂಬತ್ತನೇ ಹಾಗೂ ಕೊನೆಯ ಸುತ್ತಿನಲ್ಲಿ ಭಾರತದವರೇ ಆದ ಬಿ.ಅಧಿಬನ್‌ ಅವರೊಂದಿಗೆ 63 ನಡೆಗಳಲ್ಲಿ ಡ್ರಾ ಮಾಡಿಕೊಂಡರು. ಈ ಮೂಲಕ ಒಟ್ಟು ಏಳು ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನ ತಮ್ಮದಾಗಿಸಿಕೊಂಡರು.

ಮಹಿಳೆಯರ ವಿಭಾಗದಲ್ಲಿ ನಂದಿದಾ ಅವರು ಒಂಬತ್ತನೇ ಸುತ್ತಿನಲ್ಲಿ ದಿವ್ಯಾ ದೇಶಮುಖ್‌ ಎದುರು ಡ್ರಾ ಮಾಡಿಕೊಂಡು ಒಟ್ಟು 7.5 ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನದ‌ಲ್ಲಿ ಕಾಣಿಸಿಕೊಂಡರು.

ತಮಿಳುನಾಡಿನ 26 ವರ್ಷದ ನಂದಿದಾ, ಟೂರ್ನಿಯಲ್ಲಿ ಅಜೇಯರಾಗುಳಿದರು. ಅವರು ಒಟ್ಟು ಆರು ಸುತ್ತುಗಳಲ್ಲಿ ಗೆಲುವು ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT