ಬುಧವಾರ, ಮೇ 27, 2020
27 °C
ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್

ಕ್ವಾರ್ಟರ್‌ಫೈನಲ್‌ನಲ್ಲಿ ಮುಗ್ಗರಿಸಿದ ಪೋಗಟ್‌: ಫೈನಲ್ ತಲುಪಿದ ಸಾಕ್ಷಿ ಮಲಿಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದಹಲಿ: ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನ ಮಹಿಳೆಯರ 53 ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಭಾರತದ ವಿನೇಶ್‌ ಪೋಗಟ್‌ ಅವರು ಜಪಾನ್‌ನ ಮಯು ಮುಕೈಡಾ ಎದುರು ಸೋಲುಕಂಡರು.

ನವದೆಹಲಿಯಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಪೋಗಟ್‌ ಚಿನ್ನದ ಪದಕ ಗೆಲ್ಲುವ ಅವಕಾಶ ತಪ‍್ಪಿಸಿಕೊಂಡರೂ, ಕಂಚಿನ ಪದಕ ಜಯಿಸುವ ಅವಕಾಶ ಇದೆ. ಅದಕ್ಕಾಗಿ ಅವರು ವಿಯೆಟ್ನಾಂನ ಥಿ ಲಿ ಕಿಯು ಎದುರು ಸೆಣಸಬೇಕಿದೆ. ಪೋಗಟ್‌ಗೆ ಮುಕೈಡಾ ವಿರುದ್ಧ ಎದುರಾದ ಸತತ ಮೂರನೇ ಸೋಲು ಇದಾಗಿದೆ. 2019ರ ವಿಶ್ವ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ನಲ್ಲೂ ಸೋಲುಕಂಡಿದ್ದರು.

ರಿಯೊ ಒಲಿಂಪಿಕ್‌ನ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್‌ ಅವರು 65 ಕೆಜಿ ವಿಭಾಗದಲ್ಲಿ ಫೈನಲ್‌ ತಲುಪಿದ್ದಾರೆ. ಕೆ.ಡಿ ಜಾಧವ್‌ ಕ್ರೀಡಾಂಗಣದಲ್ಲಿ ನಡೆಯುವ ಫೈನಲ್‌ನಲ್ಲಿ, ಇಂದು ಚಿನ್ನದ ಪದಕಕ್ಕಾಗಿ ಸೆಣಸಲಿರುವ ಭಾರತದ ಏಕೈಕ ಸ್ಪರ್ಧಿಯಾಗಿದ್ದಾರೆ.

57 ಕೆಜಿ ವಿಭಾಗದಲ್ಲಿ ಜಪಾನ್‌ನ ರಿಸಾಕೊ ಕವಾಯ್‌ ಅವರೆದುರು ಅನ್ಷು ಸೆಮಿಫೈನಲ್‌ನಲ್ಲಿ ಸೋಲು ಕಂಡಿದ್ದಾರೆ. ಕಂಚಿನ ಪದಕ್ಕಾಗಿ ಅವರು ಉಜ್ಬೇಕಿಸ್ತಾನದ ಸೆವರಾ ಎಷ್ಮುರತೊವಾ ಎದುರು ಸೆಣಸಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು