ಶುಕ್ರವಾರ, ಮಾರ್ಚ್ 5, 2021
30 °C

ಅರಣ್ಯ ಇಲಾಖೆಯ ರಾಜ್ಯಮಟ್ಟದ ಕ್ರೀಡಾಕೂಟ: ಅಶ್ವಿನ್‌, ಸ್ನೇಹಾ ಮಿಂಚಿನ ಓಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ನಗರದ ಅಶ್ವಿನ್ ಎಂ.ಜೆ ಮತ್ತು ಸ್ನೇಹಾ, ಇಲ್ಲಿ ಭಾನುವಾರ ಮುಕ್ತಾಯಗೊಂಡ ಅರಣ್ಯ ಇಲಾಖೆಯ ರಾಜ್ಯಮಟ್ಟದ ಕ್ರೀಡಾಕೂಟದ ಪುರುಷರ ಮತ್ತು ಮಹಿಳೆಯರ ವಿಭಾಗದ ಓಟದಲ್ಲಿ ಗಮನಾರ್ಹ ಸಾಧನೆ ಮಾಡಿದರು.

ಅಶ್ವಿನ್‌ ಪುರುಷರ ವಿಭಾಗದ 200 ಮೀಟರ್ಸ್ ಓಟದಲ್ಲಿ ಪ್ರಥಮ, 100 ಮೀಟರ್ಸ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದರು. ಸ್ನೇಹಾ ಮಹಿಳೆಯರ ವಿಭಾಗದ 100 ಮೀಟರ್ಸ್‌ ಮತ್ತು 200 ಮೀಟರ್ಸ್ ಓಟದ‌ಲ್ಲಿ ಪ್ರಥಮರಾದರು.

ಫಲಿತಾಂಶಗಳು: ಪುರುಷರ ವಿಭಾಗ: 100 ಮೀಟರ್ಸ್ ಓಟ: ಅಯ್ಯಪ್ಪ ಕೆ.ಎಂ (ಬೆಂಗಳೂರು ಗ್ರಾಮಾಂತರ)–1. ಕಾಲ: 10.60 ಸೆಕೆಂಡ್ಸ್‌, ಅಶ್ವಿನ್ ಎಂ.ಜೆ (ಬೆಂಗಳೂರು ನಗರ)–2, ಸಲೀಂ ಶೇಕ್‌ (ಬೆಂಗಳೂರು ಗ್ರಾಮಾಂತರ)–3; 200 ಮೀಟರ್ಸ್ ಓಟ: ಅಶ್ವಿನ್ ಎಂ.ಜೆ (ಬೆಂಗಳೂರು)–1.  ಕಾಲ: 22.69 ಸೆ, ಸಲೀಂ ಶೇಕ್ (ಬೆಂಗಳೂರು)–2, ವಿಜಯ ಪಮ್ಮಾರ್‌ (ಉತ್ತರ ಕನ್ನಡ)–3; 1500 ಮೀಟರ್ಸ್ ಓಟ: ಲೋಕಿಯಾ (ಬೆಂಗಳೂರು)–1. ಕಾಲ: 4 ನಿಮಿಷ, 43ಸೆ, ಅಭಿಲಾಷ್ ಐ‍.ಪಿ (ಹಾಸನ)–2, ಉಮೇಶ್ ಹೊಸಮನಿ (ಉತ್ತರ ಕನ್ನಡ)–3; 5000 ಮೀಟರ್ಸ್ ಓಟ: ಅಭಿಲಾಷ್ ಐ‍.ಪಿ (ಹಾಸನ)–1. ಕಾಲ: 18ನಿ 48.17 ಸೆ, ಮಹೇಶ್ (ಚಾಮರಾಜನಗರ)–2, ಅರುಣ್ (ಕೊಡಗು)–3; 10ಸಾವಿರ ಮೀಟರ್ಸ್ ನಡಿಗೆ: ವಿನೋದ್ ಹೂಗಾರ (ಬೆಳಗಾವಿ)–1. ಕಾಲ: 1 ತಾಸು, 10ನಿ, 24.4 ಸೆ, ನಬಿ ಸಾಬ್‌ (ಉತ್ತರ ಕನ್ನಡ)–2, ಬಸವ ರೆಡ್ಡಿ (ಉತ್ತರ ಕನ್ನಡ)–3; ಲಾಂಗ್ ಜಂಪ್‌: ಸಂದೇಶ್ ಎಸ್‌ (ಮಂಗಳೂರು)–1. ದೂರ: 6.26 ಮೀಟರ್ಸ್‌, ಸುನೀಶ್ ಬಾಬು (ಮಂಗಳೂರು)–2, ಮುಸ್ತಾಕ್ ಅಲಿ (ಮಂಗಳೂರು)–3; ಡಿಸ್ಕಸ್‌ ಥ್ರೋ: ಸೂರ್ಯಪ್ರಕಾಶ್‌ (ಬೆಂಗಳೂರು)–1. ದೂರ: 36.60 ಮೀಟರ್ಸ್‌, ಕೆ.ಪಿ.ಚಿಗರಿ (ಬೆಳಗಾವಿ)–2, ವೆಂಟಕೇಶ್ (ಬಳ್ಳಾರಿ)–3.

ಮಹಿಳೆಯರ ವಿಭಾಗ: 100 ಮೀಟರ್ಸ್ ಓಟ: ಸ್ನೇಹಾ (ಬೆಂಗಳೂರು)–1. ಕಾಲ: 12.38 ಸೆ, ಅಫ್ಸಾನಾ (ಮೈಸೂರು)–2, ತೇಜಸ್ವಿನಿ (ಮಂಗಳೂರು)–3; 200 ಮೀಟರ್ಸ್ ಓಟ: ಸ್ನೇಹಾ–1. ಕಾಲ: 24.56 ಸೆ, ಅಫ್ಸಾನಾ–2; 1500 ಮೀಟರ್ಸ್ ಓಟ: ಅರ್ಚನಾ ಕೆ.ಎಂ (ಮೈಸೂರು)–1. ಕಾಲ: 5 ನಿಮಿಷ, 8.6 ಸೆ, ನವ್ಯಶ್ರೀ (ಮೈಸೂರು)–2, ಜ್ಯೋತಿ (ತರಬೇತಿ ಅವಧಿ)–3; 400 ಮೀಟರ್ಸ್‌ ನಡಿಗೆ: ಪ್ರತೀಕ್ಷಾ ಎಸ್‌.ಆರ್‌ (ಬೆಂಗಳೂರು): 2ನಿ, 4.9 ಸೆ, ಅಕ್ಷತಾ (ತರಬೇತಿ)–2, ಭವ್ಯಾ ಸಿ.ಕೆ (ತರಬೇತಿ)–3.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು