ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌: ಟ್ರ್ಯಾಕ್‌ನಲ್ಲಿ ದಾಖಲೆ ಬರೆದ ಅವಿನಾಶ್‌

ಜಾವೆಲಿನ್‌ನಲ್ಲಿ ಅನ್ನು ರಾಣಿಗೆ 8ನೇ ಸ್ಥಾನ
Last Updated 2 ಅಕ್ಟೋಬರ್ 2019, 17:53 IST
ಅಕ್ಷರ ಗಾತ್ರ

ದೋಹಾ: ನಾಟಕೀಯ ಬೆಳವಣಿಗೆಗಳ ಕೊನೆಯಲ್ಲಿ ಭಾರತದ ಅವಿನಾಶ್ ಸಬ್ಲೆ ಫೈನಲ್ ಪ್ರವೇಶಿಸಿದರು. ಇಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಪುರುಷರ 3000 ಮೀಟರ್ಸ್ ಸ್ಟೀಪಲ್ ಚೇಸ್‌ನಲ್ಲಿ ಈ ಸಾಧನೆ ಮಾಡಿದ ಅವಿನಾಶ್ ಚಾಂಪಿಯನ್‌ಷಿಪ್‌ನ ಟ್ರ್ಯಾಕ್‌ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಅಥ್ಲೀಟ್ ಎನಿಸಿಕೊಂಡರು.

ಮಹಾರಾಷ್ಟ್ರದ ಮಾಂಡ್ವದವರಾದ 25 ವರ್ಷದ ಅವಿನಾಶ್ ಮಂಗಳವಾರ ರಾತ್ರಿ ನಡೆದ ಮೂರನೇ ಹೀಟ್ಸ್‌ನಲ್ಲಿ ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆ ಮುರಿದಿದ್ದರು. ಆದರೆ ಫೈನಲ್‌ಗೆ ಪ್ರವೇಶಿಸಲು ವಿಫಲರಾಗಿದ್ದರು. ಟ್ರ್ವಾಕ್‌ನಲ್ಲಿ ಅವರಿಗೆ ಪ್ರತಿಸ್ಪರ್ಧಿ ಅಡ್ಡಿ ಮಾಡಿದ್ದರು ಎಂದು ಭಾರತ ಅಥ್ಲೆಟಿಕ್‌ ಫೆಡರೇಷನ್ ದೂರು ಸಲ್ಲಿಸಿತು. ವಿಡಿಯೊ ಪರಿಶೀಲಿಸಿದ ಓಟದ ರೆಫರಿ, ಫೈನಲ್‌ನಲ್ಲಿ ಸ್ಪರ್ಧಿಸಲು ಅವಕಾಶ ನೀಡಿದರು.

ಹೀಟ್ಸ್‌ನಲ್ಲಿ ಅವಿನಾಶ್ 6 ನಿಮಿಷ 25:23 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು. ಅವರ ಈ ಹಿಂದಿನ ಶ್ರೇಷ್ಠ ಸಾಧನೆ 8:28.23 ಆಗಿತ್ತು. ತಮ್ಮ ಸುತ್ತಿನ ಹೀಟ್ಸ್‌ನಲ್ಲಿ 7ನೆಯವರಾದ ಅವರು ಒಟ್ಟಾರೆ 20ನೇ ಸ್ಥಾನ ಗಳಿಸಿದರು.

ಅನ್ನು ರಾಣಿಗೆ ನಿರಾಸೆ: ಮಹಿಳೆಯರ ಜಾವೆಲಿನ್ ಥ್ರೋದಲ್ಲಿ ಸೋಮವಾರ ರಾಷ್ಟ್ರೀಯ ದಾಖಲೆ (62.43 ಮೀಟರ್ಸ್‌) ಮುರಿದಿದ್ದ ಅನ್ನು ರಾಣಿ ಅವರಿಗೆ ಮಂಗಳವಾರ ರಾತ್ರಿ ನಡೆದ ಫೈನಲ್‌ನಲ್ಲಿ ಭರ್ಚಿಯನ್ನು 61.12 ಮೀದೂರ ಎಸೆಯಲಷ್ಟೇ ಸಾಧ್ಯವಾಯಿತು.

2018ರ ಕಾಮ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ಆಸ್ಟ್ರೇಲಿಯಾದ ಕೆಲ್ಸಿ ಲೀ ಬಾರ್ಬರ್ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಅವರು 66.56 ಮೀಟರ್ಸ್ ಸಾಧನೆ ಮಾಡಿದರು. ಚೀನಾದ ಲಿಯು ಶಿಯಿಂಗ್ ಬೆಳ್ಳಿ ಮತ್ತು ಅದೇ ದೇಶದ ಲಿಯು ಹುಯ್‌ ಹುಯ್‌ ಕಂಚಿನ ಪದಕ ಗಳಿಸಿದರು. ಅವರು ಕ್ರಮವಾಗಿ 65.88 ಮೀಟರ್ಸ್ ಮತ್ತು 65.49 ಮೀಟರ್ಸ್ ದೂರ ಎಸೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT