ಶುಕ್ರವಾರ, ಏಪ್ರಿಲ್ 23, 2021
27 °C

ಏಷ್ಯಾ ಬ್ಯಾಡ್ಮಿಂಟನ್‌: ಸಿಂಧು, ಸೈನಾ ಅಲಭ್ಯ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವತ್ತ ಚಿತ್ತ ನೆಟ್ಟಿರುವ ಸೈನಾ ನೆಹ್ವಾಲ್‌ ಮತ್ತು ಪಿ.ವಿ.ಸಿಂಧು ಅವರು ಫೆಬ್ರುವರಿ 11ರಿಂದ 16ರವರೆಗೆ ಫಿಲಿಪ್ಪಿನ್ಸ್‌ನ ಮನಿಲಾದಲ್ಲಿ ನಡೆಯುವ ಏಷ್ಯಾ ಬ್ಯಾಡ್ಮಿಂಟನ್‌ ತಂಡ ಚಾಂಪಿಯನ್‌ಷಿಪ್‌ಗೆ ಅಲಭ್ಯರಾಗಿದ್ದಾರೆ.

ಅವರ ಅನುಪಸ್ಥಿತಿಯಲ್ಲಿ ಅಸ್ಮಿತಾ ಚಾಲಿಹಾ ಮತ್ತು ಮಾಳವಿಕಾ ಬನ್ಸೋಡ್‌ ಅವರು ಭಾರತದ ಸವಾಲು ಎತ್ತಿ ಹಿಡಿಯಲಿದ್ದಾರೆ.

ಪುರುಷರ ವಿಭಾಗದಲ್ಲಿ ಬಲಿಷ್ಠ ತಂಡ ಕಣಕ್ಕಿಳಿಯಲಿದೆ. ಕಿದಂಬಿ ಶ್ರೀಕಾಂತ್‌, ಬಿ.ಸಾಯಿ ಪ್ರಣೀತ್‌ ಅವರು ತಂಡದಲ್ಲಿದ್ದಾರೆ.

ಪುರುಷರ ತಂಡವು 2016ರಲ್ಲಿ ಹೈದರಾಬಾದ್‌ನಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿತ್ತು.

ತಂಡಗಳು ಇಂತಿವೆ: ಪುರುಷರು: ಕಿದಂಬಿ ಶ್ರೀಕಾಂತ್, ಬಿ.ಸಾಯಿ ಪ್ರಣೀತ್‌, ಎಚ್‌.ಎಸ್‌.ಪ್ರಣಯ್‌, ಶುಭಾಂಕರ್‌ ಡೇ, ಲಕ್ಷ್ಯ ಸೇನ್‌, ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ, ಚಿರಾಗ್‌ ಶೆಟ್ಟಿ, ಧ್ರುವ ಕಪಿಲಾ ಮತ್ತು ಎಂ.ಆರ್‌.ಅರ್ಜುನ್‌.

ಮಹಿಳೆಯರು: ಅಸ್ಮಿತಾ ಚಾಲಿಹಾ, ಆಕರ್ಷಿ ಕಶ್ಯಪ್‌, ಮಾಳವಿಕಾ ಬನ್ಸೋಡ್‌, ಗಾಯತ್ರಿ ಗೋ‍‍ಪಿಚಂದ್‌, ಅಶ್ವಿನಿ ಭಟ್‌, ಶಿಖಾ ಗೌತಮ್‌, ರುತುಪರ್ಣ ಪಾಂಡಾ ಮತ್ತು ಕೆ.ಮನೀಷಾ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು