ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್‌ ಟೂರ್ನಿಗಳು ಸ್ಥಗಿತ

Last Updated 6 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ನವದೆಹಲಿ: ಅಂತರರಾಷ್ಟ್ರೀಯ, ಜೂನಿಯರ್‌, ಪ್ಯಾರಾ ಟೂರ್ನಿ ಗಳು ಸೇರಿದಂತೆ ಮೇ ತಿಂಗಳಿಂದ ಜುಲೈವರೆಗೆ ನಡೆಯಬೇಕಿದ್ದ ಎಲ್ಲ ಟೂರ್ನಿಗಳನ್ನು ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ (ಬಿಡಬ್ಲ್ಯುಎಫ್‌) ಮುಂ ದೂಡಿದೆ. ಕೋವಿಡ್‌–19 ಭೀತಿಯ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ.

ಎಚ್‌ಎಸ್‌ಬಿಸಿ ಬಿಡಬ್ಲ್ಯುಎಫ್‌ ವಿಶ್ವ ಟೂರ್‌, ಬಿಡಬ್ಲ್ಯುಎಫ್‌ ಟೂರ್‌, ಹಲವು ಗ್ರೇಡ್‌ 2 ಹಾಗೂ ಮೂರನೇ ಗ್ರೇಡ್‌ ಟೂರ್ನಿಗಳು ಮುಂದೂಡಿಕೆಯಾಗಿರುವ ಟೂರ್ನಿಗಳಲ್ಲಿ ಸೇರಿವೆ. ‘ಆತಿಥೇಯ ಸದಸ್ಯ ಅಸೋಸಿಯೇಷನ್‌ಗಳು (ಎಚ್‌ಎಂಎ) ಹಾಗೂ ಕಾಂಟಿನೆಂಟಲ್‌ ಕಾನ್ಫೆಡರೇಷನ್ಸ್ (ಸಿಸಿ) ಜೊತೆ ಚರ್ಚಿಸಿದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ’ ಎಂದು ಬಿಡಬ್ಲ್ಯುಎಫ್‌
ಪ್ರಕಟಣೆಯಲ್ಲಿ ತಿಳಿಸಿದೆ.

ಇಂಡೊನೇಷ್ಯಾ ಓಪನ್‌ ಈ ಅವಧಿ ಯಲ್ಲಿ ಮುಂದೂಡಲ್ಪಟ್ಟ ಪ್ರಮುಖ ಟೂರ್ನಿಯಾಗಿದೆ. ಜೂನ್‌ 16ರಿಂದ 21ರವರೆಗೆ ಇದು ಜಕಾರ್ತದಲ್ಲಿ ನಡೆಯಬೇಕಿತ್ತು. ವಿಶ್ವ ಸೀನಿಯರ್‌ ಹಾಗೂ ಜೂನಿಯರ್‌ ರ‍್ಯಾಂಕಿಂಗ್‌ಗಳನ್ನುಬಿಡಬ್ಲ್ಯುಎಫ್, ಸ್ಥಗಿತಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT