ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾ ರೀನಾಗೆ ಬೆಂಗಳೂರು ಡರ್ಬಿ ಕಿರೀಟ

ವೂಲ್ಫ್‌777 ಬೆಂಗಳೂರು ಡರ್ಬಿ: ಕಣ್ತುಂಬಿಕೊಂಡ ರೇಸ್ ಅಭಿಮಾನಿಗಳು
Last Updated 26 ಜನವರಿ 2023, 20:34 IST
ಅಕ್ಷರ ಗಾತ್ರ

ಬೆಂಗಳೂರು: ಗುರುವಾರ ಸಂಜೆ ಬೆಂಗಳೂರು ಟರ್ಫ್‌ ಕ್ಲಬ್‌ ಟ್ರ್ಯಾಕ್‌ನಲ್ಲಿ ಶರವೇಗದಿಂದ ನುಗ್ಗಿದ ಲಾ ರೀನಾ ವೂಲ್ಫ್‌ 777 ಬೆಂಗಳೂರು ಡರ್ಬಿ ಪ್ರಶಸ್ತಿಯನ್ನು ಗೆದ್ದಿತು.

ಈ ಹಿಂದೆ ನಡೆದಿದ್ದ ವೂಲ್ಪ್‌777 ಬೆಂಗಳೂರು ಓಕ್ಸ್‌ ನಲ್ಲಿ ಲಾ ರೀನಾ ಭರವಸೆ ಮೂಡಿಸಿತ್ತು. ಅದನ್ನು ಇಲ್ಲಿಯೂ ಉಳಿಸಿಕೊಂಡಿತು. 2400 ಮೀಟರ್ಸ್‌ ದೂರದ ಈ ಡರ್ಬಿ ರೇಸ್‌ ಕ್ರಮಿಸಲು ಲಾ ರೀನ 2 ನಿಮಿಷ 31.62 ಸೆಕೆಂಡುಗಳನ್ನು ತೆಗೆದುಕೊಂಡಿತು. ಇದರೊಂದಿಗೆ ಕುದುರೆಯ ಮಾಲೀಕರಾದ ಕ್ವೀನ್ಸ್‌ ಗ್ಯಾಂಬಿಟ್‌ ಸಿಂಡಿಕೇಟ್‌ಗೆ ₹ 88,78,815 ಮತ್ತು ಚೆಂದದ ಟ್ರೋಫಿ ಒಲಿಯಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ರೇಸ್‌ ಅಭಿಮಾನಿಗಳು ಚಳಿಗಾಲದ ರೇಸ್ ಅನ್ನು ಕಣ್ತುಂಬಿಕೊಂಡರು.

ಬೆಟ್ಟಿಂಗ್‌ನಲ್ಲಿ ಅಶ್ವಮಗಧೀರ ಮೂರುವರೆ ಬೆಲೆಯ ಫೇವರಿಟ್‌ ಆಗಿದ್ದರೆ, ಲಾ ರೀನಾ ಮತ್ತು ಉಳಿದ ಕುದುರೆಗಳಿಗೆ ನಾಲ್ಕಕ್ಕಿಂತಲೂ ಹೆಚ್ಚಿನ ಬೆಲೆ ಇತ್ತು. ತುರುಸಿನ ಸ್ಪರ್ಧೆಯ ಸಾಧ್ಯತೆ ತೋರಿತ್ತು. ಆದರೆ, ಪದ್ಮನಾಭನ್‌ ತರಬೇತಿಯಲ್ಲಿ ಪಳಗಿದ್ದ ಲಾ ರೀನಾ ಜಾಕಿ ನೀರಜ್‌ ರಾವಲ್‌ ಸವಾರಿಯಲ್ಲಿ ಗೆದ್ದು ಪಾರಮ್ಯ ಮೆರೆಯಿತು.

ಡರ್ಬಿಗೆ ಚಾಲನೆ ದೊರೆತ ಕೂಡಲೇ ಪ್ರೇಗ್‌ ಮುನ್ನಡೆಯಲ್ಲಿತ್ತು. ಲಾ ರೀನಾ ಎರಡನೇ ಸ್ಥಾನದಲ್ಲಿ ಮತ್ತು ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಜಾರ್ಜ್‌ ಎವರೆಸ್ಟ್‌, ಅಶ್ವಮಗಧೀರ, ಟ್ರೆವಾಲಿಯಸ್‌, ವಿಕ್ಟೋರಿಯಾ ಪಂಚ್‌, ಫಾರ್‌ಸೆಟಿ, ಡಿಸ್‌ರಪ್ಟರ್‌, ಸ್ಪ್ಲೆಂಡಿಡೊ, ಸ್ಟಾರ್ಮಿ ಓಷನ್‌, ಟ್ರ್ಯಾಂಕ್ವಿಲೊ ಮತ್ತು ಲಾಸ್ಟ್‌ ವಿಶ್‌ ಓಡಿದವು.

ಕೊನೆಯ ನೇರ ಓಟದಲ್ಲಿ, 300 ಮೀಟರ್ಸ್‌ ಬಾಕಿ ಇರುವಂತೆಯೇ ಲಾ ರೀನಾ ಮುನ್ನಡೆ ಪಡೆದು ಗೆಲುವಿನ ಅಂತರವನ್ನು ಹೆಚ್ಚಿಸಿಕೊಂಡು ಕೊನೆಯಲ್ಲಿ 3 ¼ ಲೆಂತ್‌ಗಳಿಂದ ನಿರಾಯಾಸವಾಗಿ ಜಯಿಸಿತು. ಕೊನೆಯ
ಸ್ಥಾನದಲ್ಲಿ ಓಡುತ್ತಿದ್ದ ಲಾಸ್ಟ್‌ ವಿಶ್‌ ಕೊನೆಯ ಫರ್ಲಾಂಗ್‌ನಲ್ಲಿ ಮಿಂಚಿನಂತೆ ಓಡಿಬಂದು ಎರಡನೇ ಸ್ಥಾನ ಪಡೆಯಿತು.

ಕೊನೆಯ ಫರ್ಲಾಂಗ್‌ನಲ್ಲಿ ಉಳಿದ ಸ್ಥಾನಗಳಿಗಾಗಿ ಅಶ್ವಮಗಧೀರ ಮತ್ತು ಟ್ರೆವಾಲಿಸ್‌ ತೀವ್ರ ಪ್ರತಿಸ್ಪರ್ಧೆ ನಡೆಸಿದವು. ಕೊನೆಯಲ್ಲಿ ಅಶ್ವಮಗಧೀರ ಮೂರನೇ ಸ್ಥಾನ ಪಡೆಯುವಲ್ಲಿ ಸಫಲವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT