ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ.ಟಿ: ಸಂಯುಕ್ತ, ರಕ್ಷಿತ್‌ಗೆ ಪ್ರಶಸ್ತಿ

Last Updated 11 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಎ.ಸಂಯುಕ್ತ ಮತ್ತು ಆರ್‌.ರಕ್ಷಿತ್ ಅವರು ಕರ್ನಾಟಕ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ಸಿಂಗಲ್ಸ್‌ ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಭಾನುವಾರ ನಡೆದ ಫೈನಲ್‌ನಲ್ಲಿ ರಕ್ಷಿತ್‌ 6–11, 11–9, 11–3, 12–14, 11–7, 11–9ರಲ್ಲಿ ಅನಿರ್ಬನ್‌ರಾಯ್‌ ಚೌಧರಿ ಎದುರು ಗೆದ್ದರು.

ಸೆಮಿಫೈನಲ್‌ ಪಂದ್ಯಗಳಲ್ಲಿ ರಕ್ಷಿತ್‌ 6–11, 11–9, 11–6, 16–18, 11–8, 11–4ರಲ್ಲಿ ಶ್ರೇಯಲ್‌ ತೆಲಾಂಗ್‌ ಎದುರೂ, ಅನಿರ್ಬನ್‌ 8–11, 12–10, 6–11, 13–11, 11–9, 11–8ರಲ್ಲಿ ಶ್ರೇಯಸ್‌ ಎಸ್‌.ಕುಲಕರ್ಣಿ ಮೇಲೂ ವಿಜಯಿಯಾಗಿದ್ದರು.

ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಸಂಯುಕ್ತ 11–5, 11–7, 11–5, 10–12, 11–8ರಲ್ಲಿ ಸುಶ್ಮಿತಾ ಆರ್‌.ಬಿದರಿ ಅವರನ್ನು ಮಣಿಸಿದರು.

ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಸಂಯುಕ್ತ 11–6, 11–8, 11–8, 15–13ರಲ್ಲಿ ಕೌಮುದಿ ಪಟ್ನಾಕರ್‌ ಎದುರೂ, ಸುಶ್ಮಿತಾ 8–11, 11–7, 11–8, 11–13, 11–9, 11–5ರಲ್ಲಿ ವಿ.ಖುಷಿ ವಿರುದ್ಧವೂ ಜಯಿಸಿದ್ದರು.

ಪುರುಷರ ವಿಭಾಗದ ನಾನ್‌ ಮೆಡಲಿಸ್ಟ್‌ ಸಿಂಗಲ್ಸ್‌ ಫೈನಲ್‌ನಲ್ಲಿ ರಾಘವ್‌ ಮುರಳಿ 12–14, 12–10, 11–9, 8–11, 11–7ರಲ್ಲಿ ಅಂಕಣ್‌ ಜೈನ್‌ ಎದುರು ಗೆದ್ದು ಪ್ರಶಸ್ತಿ ಪಡೆದರು.

ಮಿನಿ ಕೆಡೆಟ್‌ ಬಾಲಕರ ಸಿಂಗಲ್ಸ್‌ ವಿಭಾಗದ ಪ್ರಶಸ್ತಿ ಎನ್‌.ಅರ್ಣವ್‌ ಅವರ ಪಾಲಾಯಿತು. ಫೈನಲ್‌ನಲ್ಲಿ ಅರ್ಣವ್‌ 9–11, 11–5, 11–2, 11–7ರಲ್ಲಿ ಸಿದ್ಧಾಂತ್‌ ಧರಿವಾಲಾ ಅವರನ್ನು ಪರಾಭವಗೊಳಿಸಿದರು.

ಸೆಮಿಫೈನಲ್‌ನಲ್ಲಿ ಅರ್ಣವ್‌ 11–7, 11–6, 11–7ರಲ್ಲಿ ಸಮರ್ಥ್ಯ ಮಲ್ಹೋತ್ರಾ ಎದುರೂ, ಸಿದ್ಧಾಂತ್‌ 11–5, 11–8, 11–8ರಲ್ಲಿ ವೇದಾಂತ್‌ ವಶಿಷ್ಠ ಮೇಲೂ ಗೆದ್ದಿದ್ದರು.

ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಅಕ್ಷತಾ ಶ್ರೀಕರ್‌ 11–7, 11–7, 5–11, 11–6ರಲ್ಲಿ ಶಿವಾನಿ ಮಹೇಂದ್ರನ್‌ ಎದುರು ಗೆದ್ದರು.

ಸೆಮಿಫೈನಲ್‌ನಲ್ಲಿ ಅಕ್ಷತಾ 11–4, 11–0, 11–2ರಲ್ಲಿ ರಾಶಿ ವಿ.ರಾವ್‌ ಎದುರೂ, ಶಿವಾನಿ ಮಹೇಂದ್ರನ್‌ 11–8, 11–8, 11–8ರಲ್ಲಿ ಸುಮೇಧಾ ಕೆ.ಎಸ್‌.ಭಟ್‌ ವಿರುದ್ಧವೂ ವಿಜಯಿಯಾಗಿದ್ದರು.

ಕೆಡೆಟ್‌ ಬಾಲಕರ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಕೆ.ಆಯುಷ್‌ 11–7, 6–11, 10–12, 11–6, 11–8ರಲ್ಲಿ ಸಿದ್ಧಾಂತ್‌ ವಾಸನ್‌ ಅವರನ್ನು ಸೋಲಿಸಿದರು.

ಸೆಮಿಫೈನಲ್‌ನಲ್ಲಿ ಸಿದ್ಧಾಂತ್‌ 11–3, 11–7, 6–11, 11–6ರಲ್ಲಿ ಮೊಹನೀಶ್‌ ನಂದಿ ನಾರಾ ಎದುರೂ, ಆಯುಷ್‌ 11–5, 8–11, 11–6, 11–8ರಲ್ಲಿ ಶೇಷಾಂತ್‌ ರಾಮಸ್ವಾಮಿ ಮೇಲೂ ಗೆದ್ದಿದ್ದರು.

ಬಾಲಕಿಯರ ವಿಭಾಗದಲ್ಲಿ ನೀತಿ ಅಗರವಾಲ್‌ ಚಾಂಪಿಯನ್‌ ಆದರು.

ಫೈನಲ್‌ನಲ್ಲಿ ನೀತಿ 10–12, 11–5, 14–12, 11–9ರಲ್ಲಿ ಸಾನ್ವಿ ವಿಶಾಲ್‌ ಮಂಡೇಕರ್‌ ಅವರನ್ನು ಮಣಿಸಿದರು.

ನಾಲ್ಕರ ಘಟ್ಟದ ಪೈಪೋಟಿಗಳಲ್ಲಿ ಸಾನ್ವಿ 6–11, 11–8, 11–8, 11–5ರಲ್ಲಿ ವೃಷಾಲಿ ಕಿಣಿ ಎದುರೂ, ನೀತಿ 2–11, 13–11, 6–11, 11–8, 11–9ರಲ್ಲಿ ಎಚ್‌.ಎ.ಪ್ರಾಣವಿ ಮೇಲೂ ವಿಜಯಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT