ಬೆಂಗಳೂರು: ಆರ್ಬಿಜಿ ಚಾಂಪಿಯನ್ಸ್ ಗಾಲ್ಫ್ ಟೂರ್ನ ದಕ್ಷಿಣ ಲೆಗ್ನ ಪಂದ್ಯಗಳಿಗೆ ಬೆಂಗಳೂರು ಆತಿಥ್ಯ ವಹಿಸಲಿದೆ. ಈ ತಿಂಗಳ 27ರಿಂದ 29ರ ವರೆಗೆ ಪ್ರೆಸ್ಟಿಜ್ ಗಾಲ್ಫ್ಶೈರ್ನಲ್ಲಿ ಮತ್ತು ನವೆಂಬರ್ 25ರಿಂದ 27ರ ವರೆಗೆ ಈಗಲ್ಟನ್ ಗಾಲ್ಫ್ ಕ್ಲಬ್ನಲ್ಲಿ ಟೂರ್ನಿ ನಡೆಯಲಿದೆ. 10 ಹಣಾಹಣಿಗಳ ಈ ಟೂರ್ನಲ್ಲಿ ಆಟಗಾರರು ವಿಶ್ವ ರ್ಯಾಂಕಿಂಗ್ ಪಾಯಿಂಟ್ಗಳನ್ನು ಗಳಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಜೂನಿಯರ್ (ಏಳರಿಂದ 12 ವಯಸ್ಸಿನವರು), ಹದಿಹರಯ (13ರಿಂದ 18ರ ವಯೋಮಾನ) ಮತ್ತು ಅಮೆಚೂರ್ (19 ವರ್ಷದ ಮೇಲಿನವರು) ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು ಮೂರೂ ವಿಭಾಗಗಳಲ್ಲಿ ಬಾಲಕ–ಬಾಲಕಿಯರು ಮತ್ತು ಪುರುಷ–ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆಗಳು ಇರುತ್ತವೆ.

ಪಾಲ್ಗೊಳ್ಳಬಯಸುವವರು ಪ್ರವೇಶಪತ್ರವನ್ನು championsofindia@yahoo.comಗೆ ಮೇಲ್ ಮಾಡಬೇಕು ಅಥವಾ 9810057340ಗೆ ವಾಟ್ಸ್ ಆ್ಯಪ್ ಮಾಡಬೇಕು. ಕೋವಿಡ್ ತಡೆಗೆ ಸಂಬಂಧಿಸಿದ ನಿಯಮಾವಳಿಗೆ ಬದ್ಧವಾಗಿ ಪಂದ್ಯಗಳು ನಡೆಯಲಿವೆ ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.