ಮಹಿಳಾ ಕಬಡ್ಡಿ ಚಾಂಪಿಯನ್‌ಷಿಪ್‌: ಬೆಂಗಳೂರು ವಿ.ವಿ.ಶುಭಾರಂಭ

7
ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಟೂರ್ನಿ

ಮಹಿಳಾ ಕಬಡ್ಡಿ ಚಾಂಪಿಯನ್‌ಷಿಪ್‌: ಬೆಂಗಳೂರು ವಿ.ವಿ.ಶುಭಾರಂಭ

Published:
Updated:
Deccan Herald

ಬೆಂಗಳೂರು: ಅಮೋಘ ಆಟ ಆಡಿದ ಬೆಂಗಳೂರು ವಿಶ್ವವಿದ್ಯಾಲಯ ತಂಡದವರು ದಕ್ಷಿಣ ವಲಯ ಅಂತರ ವಾರ್ಸಿಟಿ ಮಹಿಳಾ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದ್ದಾರೆ.

ದೇವನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೈದಾನದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಬೆಂಗಳೂರು ವಿ.ವಿ 40–24 ಪಾಯಿಂಟ್ಸ್‌ನಿಂದ ಅಳಗಪ್ಪ ವಿ.ವಿ ತಂಡವನ್ನು ಸೋಲಿಸಿತು.

ಇನ್ನೊಂದು ಪಂದ್ಯದಲ್ಲಿ ಶಿವಮೊಗ್ಗದ ಕುವೆಂಪು ವಿ.ವಿ 37–17ರಲ್ಲಿ ಹೈದರಾಬಾದ್‌ನ ಜೆ.ಎನ್‌.ಟಿ.ಯು ಎದುರು ಗೆದ್ದಿತು.

ಇತರ ಪಂದ್ಯಗಳಲ್ಲಿ ಕರ್ನಾಟಕ ವಿ.ವಿ 39–22ರಲ್ಲಿ ಆದಿಕವಿ ನಾಣಯ್ಯ ವಿ.ವಿ ಎದುರೂ, ಮೈಸೂರು ವಿ.ವಿ 46–11ರಲ್ಲಿ ರಾಯಲಸೀಮಾ ವಿ.ವಿ ಮೇಲೂ, ರಾಣಿಚನ್ನಮ್ಮ ವಿ.ವಿ 46–11ರಲ್ಲಿ ತುಮಕೂರು ವಿ.ವಿ ವಿರುದ್ಧವೂ, ಚೆನ್ನೈನ ಅಣ್ಣಾ ವಿ.ವಿ 36–14ರಲ್ಲಿ ನಲಗೊಂಡದ ಎಂ.ಜಿ. ವಿ.ವಿ.  ಎದುರೂ, ಆಚಾರ್ಯ ನಾಗಾರ್ಜುನ ವಿ.ವಿ 63–16ರಲ್ಲಿ ಶಿವಮೊಗ್ಗದ ಯು.ಎ.ಎಸ್‌ ಮೇಲೂ, ಕ್ಯಾಲಿಕಟ್‌ ವಿ.ವಿ 38–36ರಲ್ಲಿ ಆಂಧ್ರ ವಿ.ವಿ ವಿರುದ್ಧವೂ, ಉಸ್ಮಾನಿಯಾ ವಿ.ವಿ 59–5ರಲ್ಲಿ ಪಾಂಡಿಚೇರಿ ವಿ.ವಿ ಮೇಲೂ, ಭಾರತಿದಾಸನ್‌ ವಿ.ವಿ 60–1ರಲ್ಲಿ ದಾವಣಗೆರೆ ವಿ.ವಿ ವಿರುದ್ಧವೂ, ಯೋಗಿವೇಮನ ವಿ.ವಿ 41–33ರಲ್ಲಿ ಗಾಂಧಿಗ್ರಾಮ ವಿ.ವಿ ಎದುರೂ, ಎಂ.ಕೆ.ವಿಶ್ವವಿದ್ಯಾಲಯ 44–9ರಲ್ಲಿ ಬೆಂಗಳೂರಿನ ಯು.ಎ.ಎಸ್‌ ಮೇಲೂ ಗೆದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !