ಪ್ಯಾರಾ ಬ್ಯಾಡ್ಮಿಂಟನ್: ಪ್ರಮೋದ್, ಸುಕಾಂತ್ ಮೇಲೆ ನಿರೀಕ್ಷೆ

ನವದೆಹಲಿ: ಪ್ರಮೋದ್ ಭಗತ್ ಮತ್ತು ಸುಕಾಂತ್ ಕದಂ ಸಾವೊ ಪೌಲೊದಲ್ಲಿ ಮಂಗಳವಾರದಿಂದ ನಡೆಯಲಿರುವ ಬ್ರೆಜಿಲ್ ಪ್ಯಾರಾ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಪರವಾಗಿ ಭರವಸೆ ಮೂಡಿಸಿದ್ದಾರೆ.
ಎರಡು ವರ್ಷಗಳ ನಂತರ ಬಿಡಬ್ಲ್ಯುಎಫ್ ಪ್ಯಾರಾ ಬ್ಯಾಡ್ಮಿಂಟನ್ ಅಂತರರಾಷ್ಟ್ರೀಯ ಲೆವೆಲ್–2 ಟೂರ್ನಿ ನಡೆಯುತ್ತಿದ್ದು ವಿಶ್ವ ಕ್ರಮಾಂಕದ ಒಂದನೇ ಸ್ಥಾನದಲ್ಲಿರುವ ಪ್ರಮೋದ್ ಮತ್ತು ಮೂರನೇ ಕ್ರಮಾಂಕದ ಸುಕಾಂತ್ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.
ಪ್ರಮೋದ್ ಅವರು ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು. ಸ್ಪ್ಯಾನಿಷ್ ಪ್ಯಾರಾ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದ್ದರು. ಸುಕಾಂತ್ ಸ್ಪೇನ್ನಲ್ಲಿ ಕಂಚಿನ ಪದಕ ಗಳಿಸಿದ್ದರು.
ಮನೋಜ್ ಸರ್ಕಾರ್, ತರುಣ್ ಧಿಲೋನ್, ಪಾರುಲ್ ಪರ್ಮಾರ್, ನಿತೇಶ್ ರಾಣಾ, ಮಾನಸಿ ಜೋಶಿ, ಪಾಲಕ್ ಕೊಹ್ಲಿ ಮತ್ತು ನಿತ್ಯಶ್ರೀ ಮುಂತಾದವರು ಕಣದಲ್ಲಿರುವ ಭಾರತದ ಇತರ ಅಥ್ಲೀಟ್ಗಳು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.