ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics: ಚಿನ್ನ ಗೆದ್ದ ಚೀನಾ ಪೋರಿ; ಕಂಚಿನೊಂದಿಗೆ ಹೃದಯ ಗೆದ್ದ ಬೈಲ್ಸ್‌

Last Updated 3 ಆಗಸ್ಟ್ 2021, 19:24 IST
ಅಕ್ಷರ ಗಾತ್ರ

ಟೋಕಿಯೊ: ಚೀನಾದ 16 ಮತ್ತು 18 ವರ್ಷ ವಯಸ್ಸಿನ ಪೋರಿಯರು ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್‌ನ ಬೀಮ್ ವಿಭಾಗದ ಫೈನಲ್‌ನಲ್ಲಿ ಪದಕಗಳನ್ನು ಗೆದ್ದು ಸಂಭ್ರಮಿಸಿದರು. ಇದೇ ವೇಳೆ, ಮಾನಸಿಕ ಆರೋಗ್ಯ ಸದೃಢತೆಗಾಗಿ ಕಣದಿಂದ ದೂರ ಉಳಿದು ಮಂಗಳವಾರ ವಾಪಸ್ ಬಂದಿರುವ ಅಮೆರಿಕದ ಸಿಮೋನ್ ಬೈಲ್ಸ್ ಕ್ರೀಡಾಲೋಕದ ಹೃದಯ ಗೆದ್ದರು. ಕಂಚಿನ ಪದಕವನ್ನೂ ಗೆದ್ದುಕೊಂಡರು.

16 ವಯಸ್ಸಿನ ಗುವಾನ್ ಚೆಂಚೆನ್ ಅವರು ಚಿನ್ನದ ನಗೆಸೂಸಿದರೆ ಅವರ ಸಹ ಕ್ರೀಡಾಪಟು, 18 ವರ್ಷದ ಟ್ಯಾಂಗ್ ಜೈಜಿಂಗ್ ಬೆಳ್ಳಿ ಪದಕಕ್ಕೆ ಮುತ್ತು ನೀಡಿದರು.

ಕಳೆದ ವಾರ ನಡೆದ ಮಹಿಳೆಯರ ತಂಡ ವಿಭಾಗದ ಫೈನಲ್‌ ಸಂದರ್ಭದಲ್ಲಿ ಸಿಮೋಮ್ ಬೈಲ್ಸ್ ಕಣದಿಂದ ದೂರ ಉಳಿಯುವುದಾಗಿ ದಿಢೀರ್ ಘೋಷಿಸಿದ್ದರು. ಅವರಿಗೆ ಸಹ ಅಥ್ಲೀಟ್‌ಗಳು ಮತ್ತು ಕ್ರೀಡಾಜಗತ್ತಿನ ಅನೇಕರು ಬೆಂಬಲ ಸೂಚಿಸಿದ್ದರು.

ಮಂಗಳವಾರ ಗೆದ್ದ ಪದಕದೊಂದಿಗೆ ಬೈಲ್ಸ್‌ ಒಲಿಂಪಿಕ್ಸ್‌ನಲ್ಲಿ ಗೆದ್ದ ಪದಕಗಳ ಒಟ್ಟು ಸಂಖ್ಯೆ ಏಳಕ್ಕೇರಿತು. ಇದರೊಂದಿಗೆ ಅವರು ಶಾನನ್ ಮಿಲ್ಲರ್‌ ಅವರ ದಾಖಲೆಯನ್ನು ಸಮಗಟ್ಟಿದರು. ಅಮೆರಿಕದ ಜಿಮ್ನಾಸ್ಟ್‌ಗಳ ಪೈಕಿ ಗರಿಷ್ಠ ಸಂಖ್ಯೆಯ ಪದಕಗಳನ್ನು ಗೆದ್ದ ಸಾಧನೆ ಇವರಿಬ್ಬರದಾಗಿದೆ.

ಸಿಮೋನ್‌ ಬೈಲ್ಸ್ ಅಂಗಣಕ್ಕೆ ಬರುತ್ತಿದ್ದಂತೆ ಅಮೆರಿಕ ತಂಡದವರು ಚಪ್ಪಾಳೆ ತಟ್ಟಿ ಸ್ವಾಗತಿಸಿ ಹುರಿದುಂಬಿಸಿದರು. ಅವರ ಪ್ರೀತಿಗೆ ಅತ್ಯುತ್ತಮ ಸಾಮರ್ಥ್ಯದ ಮೂಲಕ ಬೈಲ್ಸ್ ಕೃತಜ್ಞತೆ ಸಲ್ಲಿಸಿದರು.

ಗುವಾನ್ ಚೆಂಚೆನ್ 14.633 ಸ್ಕೋರು ಸಂಗ್ರಹಿಸಿದರು. ಬೆಳ್ಳಿ ಪದಕವೂ ಚೀನಾ ಪಾಲಾಯಿತು. ಟ್ಯಾನ್ ಕ್ಸೈಜಿಂಗ್ 14.233 ಸ್ಕೋರುಗಳೊಂದಿಗೆ ಖುಷಿಯಿಂದ ನಲಿದಾಡಿದರು. ಸಿಮೋನ್ ಬೈಲ್ಸ್ ಗಳಿಸಿದ ಸ್ಕೋರು 14 ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT