ಗುರುವಾರ , ಫೆಬ್ರವರಿ 27, 2020
19 °C

ದೇಹದಾರ್ಢ್ಯ ಸ್ಪರ್ಧೆ: ಸಂಜಯ್‌ ಸಿಂಗ್‌ ‘ಭಾರತ ಶ್ರೇಷ್ಠ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕದ ಸಂಜಯ್‌ ಸಿಂಗ್‌ ಅವರು ಇಲ್ಲಿ ನಡೆದ ರಾಷ್ಟ್ರಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ‘ಭಾರತ ಶ್ರೇಷ್ಠ’ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಅಮೆಚೂರ್‌ ಬಾಡಿಬಿಲ್ಡರ್ಸ್‌ ಅಸೋಸಿಯೇಷನ್‌ ಶನಿವಾರ ಆಯೋಜಿಸಿದ್ದ ಸ್ಪರ್ಧೆಯಲ್ಲಿ ‘ಭಾರತ ಶ್ರೀ’ ಪ್ರಶಸ್ತಿಯೂ ಅವರಿಗೆ ಒಲಿಯಿತು.

‘ಭಾರತ ಶ್ರೇಷ್ಠ’ ರಾದ ಸಂಜಯ್‌ ಸಿಂಗ್‌ ₹1 ಲಕ್ಷ ನಗದು ಬಹುಮಾನ ಪಡೆದುಕೊಂಡರು. ಕರ್ನಾಟಕದವರಾದ ವೀರಭದ್ರ ಬಿ. ಎಸ್‌. ‘ಭಾರತ ಕಿಶೋರ’, ರವಿಕುಮಾರ್‌ ಡಿ. ‘ಮೆನ್‌ ಫಿಜಿಕ್‌’, ಅಶ್ವಿನಿ ತಂಬ್ರೆ ‘ವುಮೆನ್‌ ಫಿಜಿಕ್‌’ ಎನಿಸಿಕೊಂಡರು.

ಮಹಾರಾಷ್ಟ್ರದ ಪಟುಗಳಾದ ನಿತಿನ್‌ ಸಂಜೀವ್‌ ಶೆಟ್ಟಿ ‘ಭಾರತ ಉದಯ’, ಅಕ್ಷಯ್‌ ಶ್ರವಣ್‌ ಅವರು ‘ಭಾರತ ಕುಮಾರ’, ಶಾಶ್ವತ್‌ ಶಂಕರ್‌ ಮಂಕರ್‌ ‘ಭಾರತ ಕೇಸರಿ’, ನಿತಿನ್‌ ನಾಮದೇವ್‌ ಕೇಣಿ ‘ಫಿಟ್‌ನೆಸ್‌ ಮಾಡೆಲ್‌’ ಪ್ರಶಸ್ತಿಗಳನ್ನು ಗೆದ್ದುಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು