ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸಿಂಗ್‌: ಎಂಟರ ಘಟ್ಟಕ್ಕೆ ಆಶಿಶ್‌

Last Updated 5 ಮಾರ್ಚ್ 2020, 18:49 IST
ಅಕ್ಷರ ಗಾತ್ರ

ಅಮಾನ್‌, ಜೋರ್ಡನ್‌: ಭಾರತದ ಆಶಿಶ್‌ ಕುಮಾರ್‌ ಅವರು ಏಷ್ಯನ್‌ ಒಲಿಂಪಿಕ್ಸ್‌ ಕ್ವಾಲಿಫೈಯರ್ಸ್‌ ಬಾಕ್ಸಿಂಗ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಗುರುವಾರ ನಡೆದ 75 ಕೆ.ಜಿ.ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಆಶಿಶ್‌ 5–0 ಪಾಯಿಂಟ್ಸ್‌ನಿಂದ ಕಿರ್ಗಿಸ್ತಾನದ ಒಮುರ್ಬೆಕ್‌ ಬೆಕಝಿಗಿಟ್‌ ಉಲು ವಿರುದ್ಧ ಗೆದ್ದರು.

ಏಷ್ಯನ್‌ ಕ್ರೀಡಾಕೂಟದಲ್ಲಿ ಬೆಳ್ಳಿಯ ಪದಕ ಗೆದ್ದ ಸಾಧನೆ ಮಾಡಿರುವ ಆಶಿಶ್‌, ಮೊದಲ ಮೂರು ನಿಮಿಷಗಳಲ್ಲಿ ಎಚ್ಚರಿಕೆಯ ಆಟ ಆಡಿದರು. ನಂತರ ಆಕ್ರಮಣಕ್ಕೆ ಅಣಿಯಾದ ಅವರು ಎದುರಾಳಿಯ ಮುಖಕ್ಕೆ ಬಲಿಷ್ಠ ಪಂಚ್‌ಗಳನ್ನು ಮಾಡಿ ಪಾಯಿಂಟ್ಸ್‌ ಕಲೆಹಾಕಿದರು.

ಮುಂದಿನ ಸುತ್ತಿನಲ್ಲಿ ಆಶಿಶ್‌ ಅವರು ಇಂಡೊನೇಷ್ಯಾದ ಮೈಕಲ್‌ ರಾಬರ್ಟ್‌ ಮುಸ್ಕಿಟಾ ವಿರುದ್ಧ ಸೆಣಸಲಿದ್ದಾರೆ.

ಹದಿನಾರರ ಘಟ್ಟದ ಇನ್ನೊಂದು ಹಣಾಹಣಿಯಲ್ಲಿ ಮುಸ್ಕಿಟಾ, ನ್ಯೂಜಿಲೆಂಡ್‌ನ ರ‍್ಯಾನ್‌ ಸ್ಕಯಿಫ್‌ ವಿರುದ್ಧ ಜಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT