ಗುರುವಾರ , ಜೂನ್ 24, 2021
27 °C

ಪ್ರೊ ಬಾಕ್ಸಿಂಗ್‌: ಮನದೀಪ್ ಜಾಂಗ್ರಾ ಶುಭಾರಂಭ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕಾಮನ್‌ವೆಲ್ತ್ ಗೇಮ್ಸ್ ಬೆಳ್ಳಿ ಪದಕ ವಿಜೇತ, ಭಾರತದ ಮನದೀಪ್ ಜಾಂಗ್ರಾ ಅವರು ಪ್ರೊ ಬಾಕ್ಸಿಂಗ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ಅಮೆರಿಕದ ಫ್ಲೊರಿಡಾದಲ್ಲಿ ನಡೆದ ಬೌಟ್‌ನಲ್ಲಿ ಅವರು ಅರ್ಜೆಂಟೀನಾದ ಲೂಸಿಯಾನೊ ರಾಮೊಸ್ ಅವರಿಗೆ ಸೋಲಿನ ರುಚಿ ತೋರಿಸಿದರು.

ಮನದೀಪ್‌ ಅವರು ಎರಡು ತಿಂಗಳ ಹಿಂದೆ ಅಮೆರಿಕಕ್ಕೆ ತರಬೇತಿಗೆ ತೆರಳಿದ್ದರು.

ಶನಿವಾರ ನಡೆದ ಸೂಪರ್ ವಾಲ್ಟರ್‌ವೇಟ್ ವಿಭಾಗದ ಈ ಬೌಟ್‌ನಲ್ಲಿ ಮನದೀಪ್‌ 4–0ಯಿಂದ ಎದುರಾಳಿಗೆ ಸೋಲಿನ ಪಂಚ್‌ ನೀಡಿದರು.

ಭಾರತದ ಬಾಕ್ಸರ್ ಫ್ಲೊರಿಡಾ ಮೂಲದ ಪ್ರೊ ಬಾಕ್ಸ್ ಪ್ರೊಮೊಷನ್ಸ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

2013ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ವಿಜೇತರಾಗಿರುವ ಮನದೀಪ್‌, ಮಾರ್ಚ್‌ 19ರಂದು ಬೌಟ್‌ನಲ್ಲಿ ಸ್ಪರ್ಧಿಸಬೇಕಿತ್ತು. ಆದರೆ ಅದನ್ನು ಮುಂದೂಡಲಾಗಿತ್ತು.

‘ಪ್ರೊ ರ‍್ಯಾಂಕಿಂಗ್‌ನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಕ್ಕೆ ಖುಷಿಯಾಗುತ್ತಿದೆ. ನಮ್ಮ ತಂಡದೊಂದಿಗೆ ವಿಶ್ವ ಚಾಂಪಿಯನ್‌ಷಿಪ್ ಜಯಿಸುವ ವಿಶ್ವಾಸವಿದೆ‘ ಎಂದು ಮನದೀಪ್ ಹೇಳಿದ್ದಾರೆ.

ಮನದೀಪ್ ಅವರಿಗೆ ಅಮೆರಿಕದ ಆಸಾ ಬಿಯರ್ಡ್‌ ಹಾಗೂ ಮಾರ್ಕ್‌ ಫೆರ್ರಾಯಿಟ್ ತರಬೇತಿ ನೀಡುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು