ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ 2032ರ ಒಲಿಂಪಿಕ್ಸ್

32 ವರ್ಷಗಳ ಬಳಿಕ ಆಸ್ಟ್ರೇಲಿಯಾಕ್ಕೆ ಕ್ರೀಡಾಕೂಟದ ಹಕ್ಕು
Last Updated 21 ಜುಲೈ 2021, 20:03 IST
ಅಕ್ಷರ ಗಾತ್ರ

ಟೋಕಿಯೊ: 2032ರ ಒಲಿಂಪಿಕ್ ಕ್ರೀಡಾಕೂಟವನ್ನು ಬ್ರಿಸ್ಬೇನ್ ಆಯೋಜಿಸಲಿದೆ. ಎದುರಾಳಿಗಳಿಲ್ಲದ ಬಿಡ್‌ ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾದ ನಗರಕ್ಕೆ ಆತಿಥ್ಯದ ಹಕ್ಕು ಒಲಿಯಿತು.

ಇಲ್ಲಿ ನಡೆದ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಸಭೆಯಲ್ಲಿ ಈ ಆಯ್ಕೆಯನ್ನು ಪ್ರಕಟಿಸಲಾಯಿತು.

32 ವರ್ಷಗಳ ಬಳಿಕ ಆಸ್ಟ್ರೇಲಿಯಾದಲ್ಲಿ ಒಲಿಂಪಿಕ್ಸ್ ಕಲರವ ಕೇಳಿಸಲಿದೆ. 2000ರಲ್ಲಿ ಕೂಟಕ್ಕೆಸಿಡ್ನಿ ಆತಿಥ್ಯ ವಹಿಸಿತ್ತು. ಅದಕ್ಕೂ ಮೊದಲು 1956ರಲ್ಲಿ ಮೆಲ್ಬರ್ನ್‌ನಲ್ಲಿ ಒಲಿಂಪಿಕ್ಸ್ ಆಯೋಜನೆಯಾಗಿತ್ತು.

‘ನಮ್ಮ ದೇಶದಲ್ಲಿ ಕ್ರೀಡಾಕೂಟ ಯಶಸ್ವಿಯಾಗಲು ಏನು ಮಾಡಬೇಕೆಂಬುದು ನಮಗೆ ತಿಳಿದಿದೆ‘ ಎಂದು ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) ಸದಸ್ಯರೊಂದಿಗೆ ವಿಡಿಯೊ ಮೂಲಕ ನಡೆಸಿದ ಮಾತುಕತೆಯಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಸ್ಟಾಟ್ ಮಾರಿಸನ್ ಹೇಳಿದ್ದಾರೆ.

ಬ್ರಿಸ್ಬೇನ್ ನಗರ 72–5 ಮತಗಳಿಂದ ಬಿಡ್‌ಅನ್ನು ತನ್ನದಾಗಿಸಿಕೊಂಡಿತು. ಆತಿಥ್ಯದ ಹಕ್ಕು ಸಿಗುತ್ತಿದ್ದಂತೆ ಬ್ರಿಸ್ಬೇನ್‌ನಲ್ಲಿ ಸಂಭ್ರಮ ಮನೆ ಮಾಡಿತು. ಪಟಾಕಿಗಳು ಸಿಡಿದವು.

ಕ್ರೀಡಾಕೂಟಕ್ಕೆ ಸಜ್ಜುಗೊಳ್ಳಲು ಬ್ರಿಸ್ಬೇನ್‌ಗೆ 11 ವರ್ಷಗಳ ಅವಧಿಯಿದೆ. ಈ ನಡುವೆ 2024ರ ಒಲಿಂಪಿಕ್ಸ್‌ಅನ್ನು ಪ್ಯಾರಿಸ್‌ ಆಯೋಜಿಸಲಿದ್ದರೆ, 2028ರ ಕೂಟಕ್ಕೆ ಲಾಸ್‌ ಎಂಜಲೀಸ್‌ ಆತಿಥ್ಯ ವಹಿಸಲಿದೆ.

2032ರ ಕೂಟದ ಆತಿಥ್ಯದ ಕುರಿತು ಒಂದು ತಿಂಗಳ ಹಿಂದೆಯೇ ನಿರ್ಧಾರವಾದಂತಿತ್ತು. ಬುಧವಾರ ಅಧಿಕೃತವಾಗಿ ಅದನ್ನು ಪ್ರಕಟಿಸಲಾಯಿತು.

ಬ್ರಿಸ್ಬೇನ್‌ನ ಸುಪ್ರಸಿದ್ಧ ಕ್ರಿಕೆಟ್‌ ಕ್ರೀಡಾಂಗಣ ಗಾಬಾದಲ್ಲಿ ಒಲಿಂಪಿಕ್ ಕ್ರೀಡಾಕೂಟಗಳು ನಡೆಯಲಿವೆ. 1900ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ಅನ್ನು ಆಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT