ಶನಿವಾರ, ಮಾರ್ಚ್ 28, 2020
19 °C

ಚೆಸ್‌: ವೆನ್‌ಜುನ್‌ಗೆ ಆಘಾತ ನೀಡಿದ ಹರಿಕಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲೂಸನ್‌: ಭಾರತದ ಗ್ರ್ಯಾಂಡ್‌ ಮಾಸ್ಟರ್‌ ಡಿ.ಹರಿಕಾ ಅವರು ಫಿಡೆ ಮಹಿಳಾ ಗ್ರ್ಯಾನ್ ಪ್ರಿ ಚೆಸ್‌ ಟೂರ್ನಿಯ ಮೂರನೇ ಸುತ್ತಿನ ಪಂದ್ಯದಲ್ಲಿ ವಿಶ್ವ ಚಾಂಪಿಯನ್‌ ಜು ವೆನ್‌ಜುನ್‌ಗೆ ಆಘಾತ ನೀಡಿದ್ದಾರೆ.

ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಬಿಳಿ ಕಾಯಿಗಳೊಂದಿಗೆ ಆಡಿದ ಹರಿಕಾ, 54ನೇ ನಡೆಯಲ್ಲಿ ಚೀನಾದ ಆಟಗಾರ್ತಿಯನ್ನು ಮಣಿಸಿದರು. ಇದರೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು ಎರಡಕ್ಕೆ ಹೆಚ್ಚಿಸಿಕೊಂಡಿರುವ 29 ವರ್ಷ ವಯಸ್ಸಿನ ಹರಿಕಾ, ಪಟ್ಟಿಯಲ್ಲಿ ಜಂಟಿಯಾಗಿ ಅಗ್ರಸ್ಥಾನಕ್ಕೇರಿದ್ದಾರೆ.

ಉಕ್ರೇನ್‌ನ ಆ್ಯನಾ ಮುಜಿಚುಕ್‌, ರಷ್ಯಾದ ಅಲೆಕ್ಸಾಂಡ್ರಾ ಗೊರ್ಯಾಚ್‌ಕಿನಾ ಮತ್ತು ಜಾರ್ಜಿಯಾದ ನ್ಯಾನಾ ಜಾಗ್ನಿಡ್ಜೆ ಅವರೂ ಅಗ್ರಸ್ಥಾನದಲ್ಲಿದ್ದಾರೆ.

ಮೂರನೇ ಸುತ್ತಿನ ಮತ್ತೊಂದು ಪಂದ್ಯದಲ್ಲಿ ಆ್ಯನಾ, ಮರಿಯಾ ಸೆಬಗ್‌ ಎದುರು ಗೆದ್ದರು. ಅಲೆಕ್ಸಾಂಡ್ರಾ ಮತ್ತು ನ್ಯಾನಾ, ಕ್ರಮವಾಗಿ ಝಾನ್ಸಾಯಾ ಅಬ್ದುಮಲಿಕ್‌ ಮತ್ತು ಆ್ಯಂಟೋನೆಟಾ ಸ್ಟೆಫಾನೊವಾ ವಿರುದ್ಧವೂ ಡ್ರಾ ಮಾಡಿಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು