ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CWG| ಬ್ಯಾಡ್ಮಿಂಟನ್‌: ಕ್ವಾರ್ಟರ್‌ ಫೈನಲ್‌ಗೆ ಭಾರತ

ಬ್ಯಾಡ್ಮಿಂಟನ್‌: ಶ್ರೀಲಂಕಾ ವಿರುದ್ಧ 5–0 ಗೆಲುವು
Last Updated 30 ಜುಲೈ 2022, 13:36 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್ (ಪಿಟಿಐ): ಉತ್ತಮ ಆಟ ಮುಂದುವರಿಸಿದ ಭಾರತ ಬ್ಯಾಡ್ಮಿಂಟನ್‌ ತಂಡದವರು ಮಿಶ್ರ ತಂಡ ವಿಭಾಗದ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಶನಿವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಭಾರತ 5–0 ರಲ್ಲಿ ಶ್ರೀಲಂಕಾ ವಿರುದ್ಧ ಜಯಿಸಿತು. ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಇದೇ ಅಂತರದಿಂದ ಮಣಿಸಿದ್ದ ಭಾರತ, ಲೀಗ್‌ ಹಂತದ ಇನ್ನೊಂದು ಪಂದ್ಯ ಬಾಕಿಯಿರುವಂತೆಯೇ ನಾಕೌಟ್‌ ಹಂತಕ್ಕೆ ಲಗ್ಗೆಯಿಟ್ಟಿತು.

ಮೊದಲ ಪಂದ್ಯದಲ್ಲಿ ಅಶ್ವಿನಿ ಪೊನ್ನಪ್ಪ– ಸಾತ್ವಿಕ್‌ ಸಾಯಿರಾಜ್‌ ರನಕಿರೆಡ್ಡಿ ಜೋಡಿ 21–14, 21–9 ರಲ್ಲಿ ಸಚಿನ್‌ ಡಯಾಸ್– ತಿಲಿನಿ ಹೆಂದಹೆವಾ ವಿರುದ್ಧ ಗೆದ್ದು ಭಾರತಕ್ಕೆ 1–0 ಮುನ್ನಡೆ ತಂದುಕೊಟ್ಟಿತು.

ಬಳಿಕ ಲಕ್ಷ್ಯಸೇನ್‌ ಪುರುಷರ ಸಿಂಗಲ್ಸ್‌ನಲ್ಲಿ 21–18, 21–5 ರಲ್ಲಿ ನಿಲುಕ ಕರುಣರತ್ನೆ ವಿರುದ್ಧ ಗೆದ್ದರು. ಭುಜದ ನೋವಿನಿಂದ ಚೇತರಿಸಿಕೊಂಡ ಬಳಿಕ ಮೊದಲ ಪಂದ್ಯವನ್ನಾಡಿದ ಲಕ್ಷ್ಯ ಮೊದಲ ಗೇಮ್‌ನಲ್ಲಿ ಅಲ್ಪ ಚಡಪಡಿಸಿದರೂ, ಎರಡನೇ ಗೇಮ್‌ನಲ್ಲಿ ಶಿಸ್ತಿನ ಆಟವಾಡಿದರು.

ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಆಕರ್ಷಿ ಕಶ್ಯಪ್‌ 21–3, 21–9 ರಲ್ಲಿ ವಿದಾರ ಸುಹಾಸಿನಿ ವಿರುದ್ಧ ಗೆದ್ದು ಭಾರತಕ್ಕೆ 3–0 ಮುನ್ನಡೆ ತಂದಿತ್ತರು.

ಪುರುಷರ ಡಬಲ್ಸ್‌ನಲ್ಲಿ ಬಿ.ಸುಮೀತ್‌ ರೆಡ್ಡಿ– ಚಿರಾಗ್‌ ಶೆಟ್ಟಿ ಜೋಡಿ 21-10 21-13 ರಲ್ಲಿ ದುಮಿಂದು ಅಬೆವಿಕ್ರಮ– ಸಚಿನ್‌ ಡಯಾಸ್‌ ವಿರುದ್ಧವೂ, ಮಹಿಳೆಯರ ಡಬಲ್ಸ್‌ನಲ್ಲಿ ಗಾಯತ್ರಿ ಗೋಪಿಚಂದ್– ತ್ರಿಶಾ ಜೋಲಿ 21–18, 21–6 ರಲ್ಲಿ ತಿಲಿನಿ ಹೆಂದಹೆವಾ– ವಿದಾರ ಸುಹಾಸಿನಿ ಮೇಲೂ ಜಯ ಪಡೆದು ಭಾರತದ ಗೆಲುವಿನ ಅಂತರವನ್ನು 5–0ಗೆ ಹೆಚ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT