ಭಾನುವಾರ, ಆಗಸ್ಟ್ 1, 2021
21 °C

ಉದ್ದೀಪನ ಮದ್ದುಸೇವನೆ: ವೇಟ್‌ಲಿಫ್ಟರ್‌ ಪರದೀಪ್ ಸಿಂಗ್ ಅಮಾನತು

ಎಪಿ Updated:

ಅಕ್ಷರ ಗಾತ್ರ : | |

Prajavani

ಲಂಡನ್: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಜಯಿಸಿದ್ದ ವೇಟ್‌ಲಿಫ್ಟರ್‌ ಪರದೀಪ್ ಸಿಂಗ್ ಅವರನ್ನು ಉದ್ದೀಪನ ಮದ್ದ ಸೇವನೆ ಆರೋಪದಲ್ಲಿ ಅಮಾನತು ಮಾಡಲಾಗಿದೆ.

ಅವರ ರಕ್ತದ ಮಾದರಿಯಲ್ಲಿ ಮನುಷ್ಯನ ಸಾಮರ್ಥ್ಯವೃದ್ಧಿ ಯ ಕೃತಕ ಹಾರ್ಮೋನ್‌ ಅಂಶ ಪತ್ತೆಯಾಗಿದೆ. ಇದನ್ನು ವಾಡಾ ನಿಷೇಧಿಸಿದೆ.

ಹೋದ ಡಿಸೆಂಬರ್‌ನಲ್ಲಿ ಪಟಿಯಾಲಾದಲ್ಲಿದ್ದ ಪ್ರದೀಪ್ ಸಿಂಗ್ ಅವರ ರಕ್ತದ ಮಾದರಿಯನ್ನು ನಾಡಾ ಸಂಗ್ರಹಿಸಿತ್ತು. ಆ ಸಂದರ್ಭದಲ್ಲಿ ಅವರು ತರಬೇತಿ ಶಿಬಿರದಲ್ಲಿ ತಾಲೀಮು ನಡೆಸುತ್ತಿದ್ದರು.

ಮಾರ್ಚ್‌ನಲ್ಲಿ ಎ ಸ್ಯಾಂಪಲ್ ಫಲಿತಾಂಶ ನೀಡಲಾಗಿತ್ತು. ಅದರಲ್ಲಿಯೇ ಅವರು ಮದ್ದು ಸೇವನೆ ಮಾಡಿದ್ದು ಸಾಬೀತಾಗಿತ್ತು. ಆದರೆ ಬಿ ರಿಪೋರ್ಟ್ ಬರುವವರೆಗೂ ನಾಡಾ ಪ್ರಕಟಿಸಿರಲಿಲ್ಲ.

’ಭಾರತದ ಅಥ್ಲೀಟ್‌ಗಳು ಎಚ್‌ಜಿಎಚ್‌ ಬಳಕೆ ಮಾಡುತ್ತಿರುವುದು ಇದು ಮೊದಲ ಸಲವಲ್ಲ. ಆದರೆ ರಕ್ತದ ಮಾದರಿಯಲ್ಲಿ ಇದು ಪತ್ತೆಯಾಗಿರುವುದು ಪ್ರಥಮ ಬಾರಿಯಾಗಿದೆ. ಈ ಮದ್ದಿನ ಬಳಕೆ ನಡೆಯುತ್ತಿರುವ ಗುಮಾನಿ ನಮಗೆ ಮೊದಲಿನಿಂದಲೂ ಇತ್ತು. ಆದ್ದರಿಂದ ಕೆಲವು ಅಥ್ಲೀಟ್‌ಗಳನ್ನು ಗುರಿಯಾಗಿಟ್ಟುಕೊಂಡು ತಪಾಸಣೆ ಮಾಡಿದ್ದೆವು. ಅದರಲ್ಲಿ ಪ್ರದೀಪ್ ಒಬ್ಬರಾಗಿದ್ದರು‘ ಎಂದು ನಾಡಾದ ಮಹಾನಿರ್ದೇಶಕ ನವೀನ್ ಅಗರವಾಲ್ ತಿಳಿಸಿದ್ದಾರೆ.

ಭಾರತದಲ್ಲಿರುವ ರಾಷ್ಟ್ರೀಯ ಉದ್ದೀಪನ ಮದ್ದು ಪ್ರಯೋಗಾಲಯದ ಮೇಲೆ ನಿಷೇಧ ಹೇರಲಾಗಿದೆ. ಆದ್ದರಿಂದ ನಾಡಾ ಮಾದರಿಗಳನ್ನು ಸಂಗ್ರಹಿಸಿ ವಿದೇಶದಲ್ಲಿರುವ ವಾಡಾ ಮಾನ್ಯತೆ ಪಡೆದ ಪ್ರಯೋಗಾಲಯಕ್ಕೆ ಕಳಿಸುತ್ತಿದೆ.

’ಈಗ ನಾವು ರಕ್ತದ ಮಾದರಿಗಳನ್ನು ಸಂಗ್ರಹಿಸುತ್ತಿಲ್ಲ. ಲಾಕ್‌ಡೌನ್ ಕಾರಣದಿಂದ ಪ್ರಯೋಗಾಲಯಕ್ಕೆ ಕಳಿಸುವುದು ಕಷ್ಟವಾಗುತ್ತಿದೆ‘ ಎಂದು ಅಗರವಾಲ್ ಹೇಳಿದ್ದಾರೆ.

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು