ಶನಿವಾರ, ಜೂನ್ 25, 2022
21 °C

ಸೈಕ್ಲಿಂಗ್‌: ಬೆಳ್ಳಿ ಗೆದ್ದ ದಾನಮ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಬಾಗಲಕೋಟೆ ಜಿಲ್ಲೆ ಜಮಖಂಡಿಯ ದಾನಮ್ಮ ಚಿಚಖಂಡಿ, ಮುಂಬೈನಲ್ಲಿ ನಡೆಯುತ್ತಿರುವ 25ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್‍ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದರು.

ಭಾರತ ಸೈಕ್ಲಿಂಗ್‌ ಫೆಡರೇಷನ್‌ ಮತ್ತು ಮಹಾರಾಷ್ಟ್ರ ಸೈಕ್ಲಿಂಗ್‌ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ ಟೂರ್ನಿಯ ಮಹಿಳೆಯರ 60 ಕಿ.ಮೀ. ಮಾಸ್‌ ಸ್ಟಾರ್ಟ್‌ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದರು.

ಮೂರನೆ ದಿನವಾದ ಭಾನುವಾರ ನಡೆದ ನಾಲ್ಕು ಸ್ಪರ್ಧೆಗಳ ಪೈಕಿ ರಾಜ್ಯಕ್ಕೆ ಬಂದ ಏಕೈಕ ಪದಕ ಹಾಗೂ ಒಟ್ಟಾರೆ ಒಂಬತ್ತನೇ ಪದಕ ಇದಾಗಿದೆ. ಸ್ಪರ್ಧೆಯ ಮೊದಲ ಎರಡು ದಿನ ಕರ್ನಾಟಕದ ಸೈಕ್ಲಿಸ್ಟ್‌ಗಳು ಎಂಟು ಪದಕಗಳನ್ನು ಜಯಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು