ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಕ್ರೀಡಾಕೂಟದ ಅಥ್ಲೆಟಿಕ್ಸ್: ಶಶಿಕಾಂತ್‌ ನೂತನ ದಾಖಲೆ

100 ಮೀ. ಓಟದಲ್ಲಿ ಸಾಧನೆ
Last Updated 2 ಅಕ್ಟೋಬರ್ 2019, 18:07 IST
ಅಕ್ಷರ ಗಾತ್ರ

ಮೈಸೂರು: ಚಾಮುಂಡಿ ವಿಹಾರ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ನಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದ ವಿ.ಎ.ಶಶಿಕಾಂತ್‌ ಅವರು ದಸರಾ ಅಥ್ಲೆಟಿಕ್ಸ್‌ನ 100 ಮೀ. ಓಟದಲ್ಲಿ ನೂತನ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು.

ಬುಧವಾರ ಮಧ್ಯಾಹ್ನ ನಡೆದ ಸ್ಪರ್ಧೆಯಲ್ಲಿ ಬೆಂಗಳೂರು ನಗರ ವಲಯದ ಶಶಿಕಾಂತ್ 10.5 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಮೊದಲ 50 ಮೀ.ವರೆಗೆ ಸಮಬಲದ ಪೈಪೋಟಿ ಕಂಡುಬಂದಿತಾದರೂ ಬಳಿಕ ವೇಗ ಹೆಚ್ಚಿಸಿಕೊಂಡ ಶಶಿಕಾಂತ್‌ ಅಗ್ರಸ್ಥಾನ ಪಡೆದರು.

ಕ್ರಿಸ್ಟೋಫರ್ ಜೋಸೆಫ್‌ (1997) ಮತ್ತು ಸೋನಿಶ್‌ ಮೆಂಡನ್‌ (2009) ಜಂಟಿಯಾಗಿ ಹೊಂದಿದ್ದ (10.6 ಸೆ.) ದಾಖಲೆಯನ್ನು ಅವರು ಮುರಿದರು. ಬೆಂಗಳೂರಿನ ಅಲ್‌ ಅಮೀನ್‌ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಕಲಿಯುತ್ತಿರುವ ಶಶಿಕಾಂತ್‌ ಡಿವೈಇಎಸ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಮೈಸೂರು ವಲಯದ ರೋಹಿತ್‌ (10.7) ಮತ್ತು ಬೆಂಗಳೂರು ನಗರ ವಲಯದ ರಾಜ್‌ ಧರುವಾ (10.9) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದುಕೊಂಡರು.

ಬೆಳಗಾವಿ ವಲಯದ ಎಂ.ಡಿ.ಅಮರ್‌ ಮತ್ತು ಬೆಂಗಳೂರು ನಗರ ವಲಯದ ಟಿ.ಎಚ್‌.ದೇವಯ್ಯ ಅವರು ಕ್ರಮವಾಗಿ ಪುರುಷರ 400 ಮೀ. ಮತ್ತು 800 ಮೀ. ಓಟದಲ್ಲಿ ಅಗ್ರಸ್ಥಾನ ಪಡೆದುಕೊಂಡರು.

ಮೊದಲ ದಿನದ ಫಲಿತಾಂಶ: ಪುರುಷರ ವಿಭಾಗ: 100 ಮೀ. ಓಟ: ವಿ.ಎ.ಶಶಿಕಾಂತ್ (ಬೆಗಳೂರು ನಗರ)–1, ರೋಹಿತ್ (ಮೈಸೂರು)–2, ರಾಜ್ ಧರುವಾ (ಬೆಂಗಳೂರು ನಗರ)–3. ಕಾಲ: 10.5 ಸೆ.

400 ಮೀ. ಓಟ: ಎಂ.ಡಿ.ಅಮರ್ (ಬೆಳಗಾವಿ)–1, ಭಕ್ಷಿತ್‌ ಸಾಲ್ಯಾನ್ (ಮೈಸೂರು)–2, ಜಿ.ಎಲ್‌.ತೇಜಸ್ (ಬೆಂಗಳೂರು ನಗರ)–3. ಕಾಲ: 53 ಸೆ.

800 ಮೀ. ಓಟ: ಟಿ.ಎಚ್‌.ದೇವಯ್ಯ (ಬೆಂಗಳೂರು ನಗರ), ಎಂ.ಸಿ.ಮಿಲನ್ (ಮೈಸೂರು)–2, ಕುಮಾರಸ್ವಾಮಿ (ಬೆಂಗಳೂರು ನಗರ)–3. ಕಾಲ: 2 ನಿ.0.7 ಸೆ.

ಡಿಸ್ಕಸ್‌ ಥ್ರೋ: ಕೀರ್ತಿಕುಮಾರ್‌ ಬೆನಕೆ (ಬೆಳಗಾವಿ)–1, ಬಿ.ಕೆ.ಸಂಜೀವ್‌ (ಬೆಂಗಳೂರು ನಗರ)–2, ಮೊಹಮ್ಮದ್‌ ಸಕಲೈನ್ ಅಹಮದ್ (ಮೈಸೂರು)–3. ದೂರ: 46.55 ಮೀ.

ಟ್ರಿಪಲ್‌ ಜಂಪ್: ಬಿ.ನವೀನ್‌ (ಬೆಂಗಳೂರು ನಗರ)–1, ಪ್ರೀತಮ್‌ ರಾಜ್ (ಮೈಸೂರು)–2, ಓಂಕಾರ್‌ ನಾಯಕ್ (ಬೆಳಗಾವಿ)–3. ದೂರ: 14.33 ಮೀ.

ಮಹಿಳೆಯರ ವಿಭಾಗ: 800 ಮೀ. ಓಟ: ಆರ್‌.ಉಷಾ (ಬೆಂಗಳೂರು ನಗರ)–1, ಇ.ಬಿ.ಅರ್ಪಿತಾ (ಬೆಂಗಳೂರು ನಗರ)–2, ಕೆ.ಹರ್ಷಿತಾ (ಮೈಸೂರು)–3. ಕಾಲ: 2 ನಿ. 28.07 ಸೆ.

ಟ್ರಿಪಲ್‌ ಜಂಪ್‌: ಶ್ರೀದೇವಿಕಾ (ಬೆಂಗಳೂರು ಗ್ರಾಮಾಂತರ)–1, ವೈ.ಎಸ್‌.ಅನಿತಾ (ಮೈಸೂರು)–2, ಪವಿತ್ರಾ (ಮೈಸೂರು)–3. ದೂರ: 11.79 ಮೀ.

ಡಿಸ್ಕಸ್‌ ಥ್ರೋ: ಸೃಷ್ಟಿ ಉಳವಪ್ಪ (ಮೈಸೂರು)–1, ಕಲಾವತಿ ಬಸಪ್ಪ (ಬೆಂಗಳೂರು ನಗರ)–2, ಎಂ.ಎನ್‌.ಸುಷ್ಮಾ (ಮೈಸೂರು) ದೂರ: 39.68 ಮೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT