ಶುಕ್ರವಾರ, ಫೆಬ್ರವರಿ 3, 2023
18 °C
ದಸರಾ ಕ್ರೀಡಾಕೂಟ: ಡಿಸ್ಕಸ್‌ ಥ್ರೋನಲ್ಲಿ ಕಲಾವತಿ ದಾಖಲೆ

ದಸರಾ ಕ್ರೀಡಾಕೂಟ: ಹರ್ಷಿತ್‌ ಮಿಂಚಿನ ನೆಗೆತ

ಮೋಹನ್‌ ಕುಮಾರ್ ಸಿ. Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಬೆಂಗಳೂರಿನ ಎಸ್‌.ಹರ್ಷಿತ್‌, ಕಲಾವತಿ ಬಸಪ್ಪ ತೇಲಿ ಮತ್ತು ಮೈಸೂರಿನ ಚೈತ್ರಾ ದೇವಾಡಿಗ ಅವರು ಇಲ್ಲಿ ನಡೆಯುತ್ತಿರುವ ದಸರಾ ಕ್ರೀಡಾಕೂಟದ ಅಥ್ಲೆಟಿಕ್ಸ್‌ನಲ್ಲಿ ನೂತನ ದಾಖಲೆ ನಿರ್ಮಿಸಿದರು. 

ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪುರುಷರ ಹೈಜಂಪ್‌ ಸ್ಪರ್ಧೆಯಲ್ಲಿ 2.14 ಮೀ ಎತ್ತರ ಜಿಗಿದು ಚಿನ್ನ ಗೆದ್ದು ಮಿಂಚಿದ ಹರ್ಷಿತ್, 2014ರಲ್ಲಿ ಬೆಂಗಳೂರಿನ ಬಿ.ಚೇತನ್‌ ನಿರ್ಮಿಸಿದ್ದ (2.10 ಮೀ) ದಾಖಲೆಯನ್ನು ಮುರಿದರು. ಮೈಸೂರಿನ ಅನಿಲ್‌ ಕುಮಾರ್‌ (1.94 ಮೀ), ಬೆಂಗಳೂರಿನ ತ್ರಿಲೋಕ್‌ ಒಡೆಯರ್‌ (1.88 ಮೀ) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಗೆದ್ದರು. 

ಡಿಸ್ಕಸ್‌ ಥ್ರೋನಲ್ಲಿ ದಾಖಲೆ: ಮಹಿಳೆಯರ ಡಿಸ್ಕಸ್‌ ಥ್ರೋನಲ್ಲಿ 41.79 ಮೀ ಎಸೆತದ ಸಾಧನೆ ಮಾಡಿದ ಬೆಂಗಳೂರಿನ ಕಲಾವತಿ ಬಸಪ್ಪ ತೇಲಿ, 2014ರಲ್ಲಿ ಮೈಸೂರಿನ ಪ್ರಿಯಾಂಕಾ ಹೆಸರಿನಲ್ಲಿದ್ದ (41.42 ಮೀ.) ದಾಖಲೆ ಮುರಿದರು. ಮೈಸೂರಿನ ಎಂ.ಎನ್‌.ಸುಷ್ಮಾ (41.62 ಮೀ) ಕೂಡ ದಾಖಲೆ ಬರೆದು ದ್ವಿತೀಯ ಸ್ಥಾನ ಗಳಿಸಿದರೆ, ಸೃಷ್ಟಿ ಯು. ಕಳಿವಾಳ ಮೂರನೇ ಸ್ಥಾನ ಪಡೆದರು. 

ಪುರುಷರ ಡಿಸ್ಕಸ್‌ಥ್ರೋನಲ್ಲಿ ಚಿನ್ನ ಗೆದ್ದ ಮೈಸೂರಿನ ಮೊಹಮ್ಮದ್‌ ಸಖ್ಲೇನ್‌ ಅಹ್ಮದ್‌ 49.57 ಮೀ ಎಸೆದರು. 0.20 ಮೀಟರ್‌ ಅಂತರದಲ್ಲಿ ಹೊಸ ದಾಖಲೆಯ ಅವಕಾಶ ಕೈತಪ್ಪಿತು. ಬೆಂಗಳೂರಿನ ಬಿ.ಕೆ.ಸಂಜೀವ್ ಮತ್ತು ಮೋಹಿತ್ ಎನ್‌. ರಾಜ್‌ ಕ್ರಮವಾಗಿ ಬೆಳ್ಳಿ, ಕಂಚು ಗೆದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು