ಗುರುವಾರ , ಏಪ್ರಿಲ್ 9, 2020
19 °C

ಪ್ರತ್ಯೇಕವಾಸದಿಂದ ನಿರಾಳ ಭಾವ: ಬಾಕ್ಸರ್‌ ಮೇರಿ ಕೋಮ್‌

ಪಿಟಿಐ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ಹೊರಜಗತ್ತಿನಿಂದ ದೂರವಿದ್ದು ‘ಪ್ರತ್ಯೇಕವಾಸ’ದಲ್ಲಿದ್ದರೂ ಖ್ಯಾತ ಬಾಕ್ಸರ್‌ ಮೇರಿ ಕೋಮ್‌ ಅವರಿಗೆ ಇದು ಬೇಸರ ತರಿಸಿಲ್ಲ. ಈ ವಾಸದಲ್ಲಿ ಅವರು ‘ಒಂದಷ್ಟು ಸ್ವಾತಂತ್ರ್ಯ, ನಿರಾಳತೆ’ ಕಂಡುಕೊಂಡಿದ್ದಾರಂತೆ. 

ಈ ತಿಂಗಳು ಜೋರ್ಡಾನ್‌ನಲ್ಲಿ ನಡೆದ ಏಷ್ಯನ್‌ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಯಲ್ಲಿ ಪಾಲ್ಗೊಂಡು ಭಾರತಕ್ಕೆ ಆಗಮಿಸಿದ ಬಳಿಕ ಅವರು  ಕೊರೊನಾ ಸೋಂಕಿನ ಮುನ್ನೆಚ್ಚರಿಕಾ ಕ್ರಮವಾಗಿ ದೆಹಲಿಯಲ್ಲಿರುವ ತಮ್ಮ ನಿವಾಸದಲ್ಲಿ ‘ಸ್ವಯಂ ಪ್ರತ್ಯೇಕವಾಸ’ದಲ್ಲಿದ್ದಾರೆ.

ಇಟಲಿಯಲ್ಲಿ ತರಬೇತಿ ಪಡೆದಿದ್ದ ಭಾರತದ ಬಾಕ್ಸರ್‌ಗಳ ತಂಡವು, ಜೋರ್ಡಾನ್‌ ಪ್ರವೇಶಿಸುವ ಮುನ್ನ ಕೊರೊನಾ ಸೋಂಕು ಪರೀಕ್ಷೆಗೆ ಒಳಗಾಗಿತ್ತು. ಯಾರಲ್ಲಿಯೂ ಸೋಂಕು ಪತ್ತೆಯಾಗಿಲ್ಲ ಎಂದು ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) ಪ್ರಮಾಣ ಪತ್ರ ನೀಡಿದೆ.

‘ಒಂದು ತಿಂಗಳು ಮಕ್ಕಳಿಂದ ದೂರವಿದ್ದೆ. ಸದ್ಯ ಅವರೊಂದಿಗೆ ಕಾಲ ಕಳೆಯುತ್ತ, ಫಿಟ್‌ನೆಸ್‌ ಕಡೆ ಗಮನ ನೀಡುತ್ತ ನಿರಾಳವಾಗಿದ್ದೇನೆ’ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮೇರಿ ಹೇಳಿದ್ದಾರೆ.

‘ಭಯಪಡಬೇಡಿ, ಸಾಧ್ಯವಾದಷ್ಟು ಮನೆಯಲ್ಲೇ ಇರಲು ಪ್ರಯತ್ನಿಸಿ, ಕುಟುಂಬದೊಂದಿಗೆ ಕಾಲ ಕಳೆಯಿರಿ’ ಎಂದು ನಾಗರಿಕರಲ್ಲಿ ಮನವಿ ಮಾಡಿರುವ ಅವರು, ನನಗೀಗ ಯಾವುದೇ ಒತ್ತಡಗಳಿಲ್ಲ ಎಂದಿದ್ದಾರೆ.

ಆರು ಬಾರಿ ವಿಶ್ವ ಚಾಂಪಿಯನ್‌ ಆಗಿರುವ ಮೇರಿ, ರಾಜ್ಯಸಭೆಯ ಹಾಲಿ ಸದಸ್ಯೆಯೂ ಹೌದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು