ಮಂಗಳವಾರ, ಜೂನ್ 22, 2021
28 °C
ಸೆಮಿಫೈನಲ್‌ಗೆ ಮುನ್ನಡೆದ ಕೊರಿಯಾದ ಆ್ಯನ್‌ ಸೆ ಯಂಗ್‌

ಫ್ರೆಂಚ್‌ ಓಪನ್‌: ಸೈನಾ ನಿರ್ಗಮನ

ಪಿಟಿಐ Updated:

ಅಕ್ಷರ ಗಾತ್ರ : | |

ಪ್ಯಾರಿಸ್‌ : ಭಾರತದ ಸೈನಾ ನೆಹ್ವಾಲ್‌, ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ  ಹೋರಾಟ ತೋರಿದರೂ ಅಂತಿಮವಾಗಿ ಕೊರಿಯಾದ ಆ್ಯನ್‌ ಸೆ ಯಂಗ್‌ ಅವರಿಗೆ ನೇರ ಆಟಗಳಲ್ಲಿ ಸೋಲಬೇಕಾಯಿತು.

ಶುಕ್ರವಾರ ನಡೆದ ಪಂದ್ಯದಲ್ಲಿ 29 ವರ್ಷದ ಸೈನಾ, 49 ನಿಮಿಷಗಳ ತೀವ್ರ ಹೋರಾಟದ ನಂತರ 20–22, 21–23ರಲ್ಲಿ ವಿಶ್ವ 16ನೇ ಕ್ರಮಾಂಕದ ಯಂಗ್ ಎದುರು ಸೋಲೊಪ್ಪಬೇಕಾಯಿತು.

ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್ ಫೈನಲ್‌ ತಲುಪಿದ ನಂತರ ಮೊದಲ ಬಾರಿ ಸೈನಾ ಇಲ್ಲಿ ಎಂಟರ ಘಟಕ್ಕೆ ಮುನ್ನಡೆದಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು