ಭಾನುವಾರ, ಡಿಸೆಂಬರ್ 6, 2020
19 °C

30ರಿಂದ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕ ಟೇಬಲ್‌ ಟೆನಿಸ್‌ ಸಂಸ್ಥೆಯು (ಕೆಟಿಟಿಎ) ಮೊದಲ ಬಾರಿ ರಾಜ್ಯ ರ‍್ಯಾಂಕಿಂಗ್‌ ಟೂರ್ನಿಯನ್ನು ಆಯೋಜಿಸುತ್ತಿದೆ. ಅಕ್ಟೋಬರ್‌ 30ರಿಂದ ಟೂರ್ನಿಯು ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ.

ಎರಡು ದಿನಗಳ ಕಾಲ, ಪುರುಷ ಹಾಗೂ ಮಹಿಳೆಯರ ಜೂನಿಯರ್‌, ಯೂತ್‌ ಹಾಗೂ ಸೀನಿಯರ್ ಸಿಂಗಲ್ಸ್ ವಿಭಾಗದಲ್ಲಿ ಪಂದ್ಯಗಳು ನಡೆಯಲಿವೆ. ಕೋವಿಡ್–19 ಪಿಡುಗಿನ ಹಿನ್ನೆಲೆಯಲ್ಲಿ ಉಂಟಾಗಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೆಡೆಟ್ಸ್ ಹಾಗೂ ಸಬ್‌ ಜೂನಿಯರ್‌ ವಿಭಾಗದ ಪಂದ್ಯಗಳನ್ನು ಆಯೋಜಿಸುತ್ತಿಲ್ಲ. ಟೂರ್ನಿಗೆ ಹೆಸರು ನೋಂದಾಯಿಸಲು ಇದೇ 26 ಕೊನೆಯ ದಿನ.

ಮಾಹಿತಿಗಾಗಿ ಮುಖ್ಯ ರೆಫರಿ ಮನೋಹರನ್‌ (ಮೊ.ಸಂ. 9448808663) ಅವರನ್ನು ಸಂಪರ್ಕಿಸಬೇಕು ಎಂದು ಕೆಟಿಟಿಎ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು