ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿಪರ ಬಾಕ್ಸಿಂಗ್‌: ನೀರಜ್‌ಗೆ ಸುಲಭ ಜಯ

Last Updated 14 ಮಾರ್ಚ್ 2020, 19:49 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಬಾಕ್ಸರ್‌ ನೀರಜ್‌ ಗೋಯತ್‌ ಶನಿವಾರ ಆಕ್ಲೆಂಡ್‌ನಲ್ಲಿ ನಡೆದ ವೃತ್ತಿಪರ ಬಾಕ್ಸಿಂಗ್‌ ಸೆಣಸಾಟದಲ್ಲಿ ನ್ಯೂಜಿಲೆಂಡ್‌ನ ಒಬೆಡಿ ಮಗುಚಿ ಅವರನ್ನು ಸೋಲಿಸಿದರು. ಕಳೆದ ವರ್ಷದ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡ ನಂತರ ಇದು ಅವರ ಮೊದಲ ಸೆಣಸಾಟವಾಗಿತ್ತು.

ಆರು ಸುತ್ತುಗಳ ಈ ಸ್ಪರ್ಧೆ ಎರಡು ಸುತ್ತುಗಳಲ್ಲಿ ಮುಗಿಯಿತು. ‘ಎದುರಾಳಿ ಎರಡು ಸುತ್ತುಗಳಲ್ಲೇ ಸೋಲನ್ನು ಒಪ್ಪಿಕೊಂಡರು. ಅಂತಿಮವಾಗಿ ಈ ಹೋರಾಟ ನಿರೀಕ್ಷೆಗಿಂತ ಸುಲಭವಾಯಿತು’ ಎಂದು ನೀರಜ್‌ ಹೇಳಿದರು.

ಐದು ಸೆಣಸಾಟಗಳ ಅನುಭವದೊಡನೆ ಮೆಗುಚಿ ಕಣಕ್ಕಿಳಿದಿದ್ದರು. ಅವರು ಆ ಐದರಲ್ಲಿ ಮೂರರಲ್ಲಿ ಗೆಲುವು ಕಂಡಿದ್ದರು. ಇನ್ನೊಂದು ಕಡೆ, 27 ವರ್ಷದ ನೀರಜ್‌ 16 ಸೆಣಸಾಟಗಳಲ್ಲಿ 11ರಲ್ಲಿ ಜಯಗಳಿಸಿದ ಅನುಭವದೊಡನೆ ಆಡಲು ಇಳಿದಿದ್ದರು.

ಹರಿಯಾಣದ ಈ ಬಾಕ್ಸರ್‌, ಕಳೆದ ವರ್ಷದ ಜೂನ್‌ನಲ್ಲಿ ದೆಹಲಿಯಲ್ಲಿ ತರಬೇತಿ ಮುಗಿಸಿ ಕಾರಿನಲ್ಲಿ ಮನೆಗೆ ಮರಳುತ್ತಿದ್ದ ವೇಳೆ ಅಪಘಾತದ ವೇಳೆ ಗಾಯಗೊಂಡಿದ್ದರು. ಹೀಗಾಗಿ ಅವರು ಬ್ರಿಟನ್‌ನ ಬಾಕ್ಸಿಂಗ್‌ ತಾರೆ ಅಮೀರ್‌ ಖಾನ್‌ ಎದುರಿನ ಡಬ್ಲ್ಯುಬಿಸಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲು ಆಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT