ವಿಶ್ವ ಟ್ರಯಾಥ್ಲಾನ್ ಲೆಕ್ಕ ಪರಿಶೋಧನಾ ಸಮಿತಿಗೆ ಭಾರತದ ರಾಮಚಂದ್ರನ್ ಆಯ್ಕೆ

ಚೆನ್ನೈ : ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಮಾಜಿ ಅಧ್ಯಕ್ಷ ಎನ್.ರಾಮಚಂದ್ರನ್ ಅವರು ವಿಶ್ವ ಟ್ರಯಾಥ್ಲಾನ್ ಲೆಕ್ಕಪರಿಶೋಧನಾ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಭಾರತ ಟ್ರಯಾಥ್ಲಾನ್ ಫೆಡರೇಷನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಅವರು, ಭಾನುವಾರ ವರ್ಚುವಲ್ ಆಗಿ ನಡೆದ 33ನೇ ವಿಶ್ವ ಟ್ರಯಾಥ್ಲಾನ್ ಕಾಂಗ್ರೆಸ್‌ನ ಚುನಾವಣೆಯ ಮೂಲಕ ಆಯ್ಕೆಗೊಂಡರು.
ಈ ಸಮಿತಿಗೆ ಚುನಾಯಿತರಾದ ಭಾರತದ ಮೊದಲ ವ್ಯಕ್ತಿ ರಾಮಚಂದ್ರನ್ ಆಗಿದ್ದಾರೆ.
‘ವಿಶ್ವ ಟ್ರಯಾಥ್ಲಾನ್ ಲೆಕ್ಕ ಪರಿಶೋಧನಾ ಸಮಿತಿಗೆ ಆಯ್ಕೆಯಾಗಿದ್ದು ದೊಡ್ಡ ಗೌರವ‘ ಎಂದು ರಾಮಚಂದ್ರನ್ ಹೇಳಿದ್ದಾರೆ.
ರಾಮಚಂದ್ರನ್ ಅವರು ಸದ್ಯ ತಮಿಳುನಾಡಿನ ಒಲಿಂಪಿಕ್ ಸಂಸ್ಥೆ ಹಾಗೂ ಟ್ರಯಾಥ್ಲಾನ್ ಸಂಸ್ಥೆಗಳ ಅಧ್ಯಕ್ಷರೂ ಹೌದು.
ವಿಶ್ವ ಟ್ರಯಾಥ್ಲಾನ್‌ನ ಅಧ್ಯಕ್ಷರಾಗಿ ಸ್ಪೇನ್ನ ಮ್ಯಾರಿಸೊಲ್ ಕ್ಯಾಸಾಡೊ ಅವರು ಮರು ಆಯ್ಕೆಯಾದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.