ಶುಕ್ರವಾರ, ನವೆಂಬರ್ 27, 2020
20 °C
‘ಫಾರ್ಮುಲಾ ಒನ್‌’ ಚೈನೀಸ್ ಗ್ರಾಂಡ್‌ಪ್ರಿಕ್ಸ್

ಸೆಬಾಸ್ಟಿಯನ್‌ ವೆಟಲ್‌ ದಾಖಲೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಶಾಂಘೈ: ಫೆರಾರಿ ತಂಡದ ಸೆಬಾಸ್ಟಿಯನ್ ವೆಟಲ್ ‘ಫಾರ್ಮುಲಾ ಒನ್‌’ ಚೈನೀಸ್ ಗ್ರ್ಯಾನ್‌ಪ್ರೀ ರೇಸ್‌ನ ಅಭ್ಯಾಸ ಸ್ಪರ್ಧೆಯಲ್ಲಿ ವೇಗವಾಗಿ ಗುರಿ ಮುಟ್ಟಿ ದಾಖಲೆ ನಿರ್ಮಿಸಿದ್ದಾರೆ.

ಶುಕ್ರವಾರ ನಡೆದ ಫಾರ್ಮುಲಾ ಒನ್‌ನ 1000ನೇ ರೇಸ್‌ನಲ್ಲಿ ಅಭ್ಯಾಸ ದಲ್ಲಿ ಪಾಲ್ಗೊಂಡಿದ್ದ ವೆಟಲ್‌, ಒಂದು ನಿಮಿಷ, 33.911 ಸೆಕೆಂಡುಗಳಲ್ಲಿ ಗುರಿ ತಲುಪಿ ದಾಖಲೆ ಬರೆದರು.

ಮರ್ಸಿಡಿಸ್‌ ತಂಡದ ಲೂಯಿಸ್‌ ಹ್ಯಾಮಿಲ್ಟನ್ ಅವರು ವೆಟಲ್‌ಗಿಂತ 0.207 ಸೆಕೆಂಡ್‌ ತಡವಾಗಿ ಗುರಿಮುಟ್ಟಿ ಎರಡನೇ ಸ್ಥಾನ ಪಡೆದರೆ, ಫೆರಾರಿಯ ಚಾರ್ಲ್ಸ್ ಲೆಕ್ಲೆರ್ಕ್‌ ಮೂರನೆ ಸ್ಥಾನ ಪಡೆದರು. 

ಹಿಂದಿನ ಫಾರ್ಮುಲಾ ಒನ್‌ ರೇಸ್‌ಗಳಲ್ಲಿ ನಿರಾಸೆ ಅನುಭವಿಸಿದ್ದ 31ರ ವಯೋಮಾನದ ವೆಟಲ್‌ ಅವರು ಇಲ್ಲಿ ಮಿಂಚಿನ ಸಾಮರ್ಥ್ಯ ತೋರಿ ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು