ಮಂಗಳವಾರ, ಜೂಲೈ 7, 2020
29 °C

ಗಾಲ್ಫ್‌: ಪ್ರಶಸ್ತಿ ಕನಸಲ್ಲಿ ರಶೀದ್‌, ರಾಂಧವಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪಂಚಕುಲ: ಭಾರತದ ಗಾಲ್ಫರ್‌ಗಳಾದ ಜ್ಯೋತಿ ರಾಂಧವಾ, ರಶೀದ್‌ ಖಾನ್‌ ಮತ್ತು ಚಿರಾಗ್‌ ಕುಮಾರ್‌ ಅವರು ಮಂಗಳವಾರದಿಂದ ನಡೆಯುವ ಟಾಟಾ ಸ್ಟೀಲ್‌ ಪಿಜಿಟಿಐ ಪ್ಲೇಯರ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸುವ ಹುಮ್ಮಸ್ಸಿನಲ್ಲಿದ್ದಾರೆ.

₹ 30 ಲಕ್ಷ ಬಹುಮಾನ ಮೊತ್ತದ ಚಾಂಪಿಯನ್‌ಷಿಪ್‌ ಪಂಚಕುಲ ಗಾಲ್ಫ್‌ ಕ್ಲಬ್‌ನಲ್ಲಿ ಆಯೋಜನೆಯಾಗಿದೆ.

ಹನಿ ಬೈಸೋಯಾ, ಉದಯನ್‌ ಮಾನೆ ಮತ್ತು ಕ್ಷಿತಿಜ್‌ ನವೀದ್‌ ಕೌಲ್‌ ಅವರೂ ಭಾರತದ ಭರವಸೆಯಾಗಿದ್ದಾರೆ. ರಾಂಧವಾ ಅವರು ಮೊದಲ ಬಾರಿಗೆ ಪಂಚಕುಲ ಗಾಲ್ಫ್‌ ಕ್ಲಬ್‌ನಲ್ಲಿ ಕಣಕ್ಕಿಳಿಯುತ್ತಿದ್ದಾರೆ.

ಶ್ರೀಲಂಕಾದ ಗಾಲ್ಫರ್‌, ಹಾಲಿ ಚಾಂಪಿಯನ್‌ ಎನ್‌.ತಂಗರಾಜ್‌, ಅನುರಾ ರೋಹನಾ, ಮಿಥುನ್‌ ಪೆರೇರಾ, ಕೆ.ಪ್ರಭಾಕರನ್‌, ಬಾಂಗ್ಲಾದೇಶದ ಮೊಹಮ್ಮದ್‌ ಜಮಾಲ್‌ ಹುಸೇನ್ ಮೊಲ್ಲಾ ಮತ್ತು ಆಸ್ಟ್ರೇಲಿಯಾದ ಕುನಾಲ್‌ ಬಾಸಿನ್‌ ಅವರೂ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು