ಬುಧವಾರ, ಆಗಸ್ಟ್ 5, 2020
24 °C

ಗಾಲ್ಫ್‌ ಆಟಗಾರ ಚೌರಾಸಿಯಾಗೆ ಕೋವಿಡ್‌

ಪಿಟಿಐ Updated:

ಅಕ್ಷರ ಗಾತ್ರ : | |

ಎಸ್‌ಎಸ್‌ಪಿ ಚೌರಾಸಿಯಾ

ಕೋಲ್ಕತ್ತ: ಭಾರತದ ‍ಪ್ರಮುಖ ಗಾಲ್ಫ್‌ ಆಟಗಾರ ಎಸ್‌ಎಸ್‌ಪಿ ಚೌರಾಸಿಯಾ ಅವರಿಗೆ ಕೋವಿಡ್‌–19 ಸೋಂಕು ಇರುವುದು ಭಾನುವಾರ ದೃಢಪಟ್ಟಿದೆ. ಸದ್ಯ ಅವರು ಮನೆಯಲ್ಲೇ ಕ್ವಾರಂಟೈನ್‌ನಲ್ಲಿದ್ದಾರೆ. ಇದರಿಂದ ಯುರೋಪಿಯನ್‌ ಟೂರ್‌ನಲ್ಲಿ ಸ್ಪರ್ಧಿಸಬೇಕೆಂಬ ಅವರ ಕನಸು ಕಮರಿದೆ.

ಯುರೋಪಿಯನ್‌ ಟೂರ್‌ನಲ್ಲಿ ನಾಲ್ಕು ಬಾರಿ ಚಾಂಪಿಯನ್‌ ಆಗಿರುವ ಚೌರಾಸಿಯಾ, 2016 ಹಾಗೂ 2017ರಲ್ಲಿ ಇಂಡಿಯಾ ಓಪನ್‌ ಟೂರ್ನಿಗಳಲ್ಲಿ ಅಗ್ರಸ್ಥಾನ ಗಳಿಸಿದ್ದರು. ರಾಯಲ್‌ ಕಲ್ಕತ್ತ ಗಾಲ್ಫ್‌ ಅಂಗಣದಲ್ಲಿ ತರಬೇತಿಯನ್ನು ಆರಂಭಿಸಿದ್ದ ಅವರು ಈ ವಾರ ಇಂಗ್ಲೆಂಡ್‌ಗೆ ತೆರಳಬೇಕಿತ್ತು.

‘ಕೋವಿಡ್‌–19 ಸೋಂಕಿನ ಯಾವುದೇ ಲಕ್ಷಣಗಳು ನನ್ನಲ್ಲಿ ಇಲ್ಲ. ಪ್ರಯಾಣದ ಸಲುವಾಗಿ ಅಗತ್ಯವಾಗಿ ಕೋವಿಡ್‌ ತಪಾಸಣೆಗೆ ಒಳಗಾಗಬೇಕಿತ್ತು. ಅದರಂತೆ ಶುಕ್ರವಾರ ಪರೀಕ್ಷೆಗೆ ಒಳಪಟ್ಟಾಗ ಕೋವಿಡ್‌ ಇರುವುದು ದೃಢಪಟ್ಟಿದೆ' ಎಂದು 42 ವರ್ಷದ ಚೌರಾಸಿಯಾ ಹೇಳಿದ್ದಾರೆ.

ಅವರ ಪತ್ನಿ ಸಿಮಂತಿನಿ ಅವರು ಮಂಗಳವಾರ ಕೋವಿಡ್‌ ತಪಾಸಣೆಗೆ ಒಳಗಾಗಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು