ಶನಿವಾರ, ಅಕ್ಟೋಬರ್ 1, 2022
20 °C
ಗ್ರ್ಯಾನ್‌ಪ್ರಿ ಬ್ಯಾಡ್ಮಿಂಟನ್ ಲೀಗ್‌: ಕೊಡಗು ಟೈಗರ್ಸ್‌ಗೆ ನಿರಾಸೆ

ಬಂಡೀಪುರ ಟಸ್ಕರ್ಸ್ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಂಡೀಪುರ ಟಸ್ಕರ್ಸ್ ತಂಡವು ಗ್ರ್ಯಾನ್‌ಪ್ರಿ ಬ್ಯಾಡ್ಮಿಂಟನ್ ಲೀಗ್ ಟೂರ್ನಿಯ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಕೊಡಗು ಟೈಗರ್ಸ್‌ಗೆ ಸೋಲುಣಿಸಿತು.

ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ (ಕೆಬಿಎ) ಅಂಗಣದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಭಾನುವಾರ ಬಂಡೀಪುರ ತಂಡಕ್ಕೆ 6–3ರಿಂದ ಜಯ ಒಲಿಯಿತು.

ಮಹಿಳಾ ಸಿಂಗಲ್ಸ್‌ನ ಮೊದಲ ಪಂದ್ಯದಲ್ಲಿ ಕೊಡಗು ಟೈಗರ್ಸ್ ತಂಡವು ರುಜುಲಾ ರಾಮು ಅವರನ್ನು ಕಣಕ್ಕಿಳಿಸಿತು. ಈ ‘ಟ್ರಂಪ್‌’ ಹಣಾಹಣಿಯಲ್ಲಿ ರುಜುಲಾ 9-15, 11-15ರಿಂದ ಅಲ್ಫಿಯಾ ರಿಯಾಜ್ ಅವರನ್ನು ಮಣಿಸಿದರು. ಆದರೆ ಪುರುಷರ ಡಬಲ್ಸ್ ‘ಟ್ರಂಪ್’ ಪಂದ್ಯದಲ್ಲಿ ಬಂಡೀಪುರ ತಂಡದ ಅಭಿಷೇಕ್ ಎಲಿಗಾರ– ವೈಭವ್ ವಿ. ಜೋಡಿ 15-13, 11-15, 15-8ರಿಂದ ಆದರ್ಶ್ ಕುಮಾರ್–ವಸಂತ್ ಕುಮಾರ್ ಅವರನ್ನು ಮಣಿಸಿ ಸಮಬಲ ಸಾಧಿಸಿತು.

ಈ ಹಂತದಲ್ಲಿ ಆಟ ಮತ್ತಷ್ಟು ರಂಗೇರಿತು. ಪುರುಷರ ಸಿಂಗಲ್ಸ್ ಪಂದ್ಯದಲ್ಲೂ ಅಭಿಷೇಕ್‌ 15-6, 15-7ರಿಂದ ವಿಶೇಷ್ ಶರ್ಮಾ ಅವರಿಗೆ ಸೋಲುಣಿಸಿ ತಮ್ಮ ತಂಡಕ್ಕೆ ಮುನ್ನಡೆ ಒದಗಿಸಿದರು. ಆದರೆ ಮಿಶ್ರ ಡಬಲ್ಸ್‌ನಲ್ಲಿ ಕೊಡಗು ತಂಡದ ಸನೀತ್ ದಯಾನಂದ್ ಮತ್ತು ರಮ್ಯಾ ವೆಂಕಟೇಶ್ ಜೋಡಿ 15–10, 15–12ರಿಂದ ಗೆದ್ದು ಮತ್ತೆ ಪಂದ್ಯ ಸೆಣಸಾಟ ಸಮಬಲವಾಗುವಂತೆ ಮಾಡಿದರು.

ನಿರ್ಣಾಯಕ ಸೂಪರ್ ಪಂದ್ಯದಲ್ಲಿ ಬಂಡೀಪುರ ತಂಡದ ಡ್ಯಾನಿಯಲ್ ಫರೀದ್‌, ವೈಭವ್ ವಿ. ಮತ್ತು ಗಣೇಶ್‌ ವಿಠ್ಠಲ ಜೀ ಅವರು 21–16ರಿಂದ ಸನೀತ್ ದಯಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು