ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಸಮಗಟ್ಟಿದ ಹ್ಯಾಮಿಲ್ಟನ್‌

ಟರ್ಕಿಶ್ ಗ್ರ್ಯಾನ್‌ಪ್ರಿಯ ಪ್ರಶಸ್ತಿ ಗೆದ್ದುಕೊಂಡ ಬ್ರಿಟನ್ ಚಾಲಕ; ಒಟ್ಟಾರೆ 94 ಬಾರಿ ಚಾಂಪಿಯನ್‌
Last Updated 15 ನವೆಂಬರ್ 2020, 16:02 IST
ಅಕ್ಷರ ಗಾತ್ರ

ಇಸ್ತಾಂಬುಲ್: ಮೋಟರ್ ವಾಹನ ಚಾಲನೆಯಲ್ಲಿ ತಮ್ಮ ಚಾಣಾಕ್ಷತನವನ್ನು ಮತ್ತೊಮ್ಮೆ ಸಾಬೀತು ಮಾಡಿದ ಬ್ರಿಟನ್‌ನ ಲೂಯಿಸ್ ಹ್ಯಾಮಿಲ್ಟನ್ ಭಾನುವಾರ ಮುಕ್ತಾಯಗೊಂಡ ಟರ್ಕಿಶ್ ಗ್ರ್ಯಾನ್‌ಪ್ರಿಯ ಪ್ರಶಸ್ತಿ ಗೆದ್ದುಕೊಂಡರು. ಈ ಮೂಲಕ ಫಾರ್ಮುಲಾ ಒನ್‌ನಲ್ಲಿ ಏಳನೇ ಪ್ರಶಸ್ತಿಯ ಒಡೆಯ ಎನಿಸಿಕೊಂಡು ವಿಶ್ವ ದಾಖಲೆಯನ್ನು ಸಮಗಟ್ಟಿದರು.

ಇನ್ನು ಒಂದು ಪ್ರಶಸ್ತಿ ಗೆದ್ದರೆ ಅವರು ಬ್ರಿಟನ್‌ನ ಮೈಕಲ್ ಶುಮಾಕರ್ ಅವರನ್ನು ಹಿಂದಿಕ್ಕಲಿದ್ದಾರೆ. ಈ ಋತುವಿನಲ್ಲಿ ಇನ್ನೂ ಮೂರು ರೇಸ್‌ಗಳು ಬಾಕಿ ಉಳಿದಿದ್ದು35 ವರ್ಷದ ದಾಖಲೆ ಮುರಿಯಲು ಹ್ಯಾಮಿಲ್ಟನ್ ಅವರಿಗೆ ಅಪೂರ್ವ ಅವಕಾಶವಿದೆ.

ರೇಸ್‌ನಲ್ಲಿ ಹ್ಯಾಮಿಲ್ಟನ್ ಮೊದಲ ಪ್ರಶಸ್ತಿ ತಮ್ಮದಾಗಿಸಿಕೊಂಡು 12 ವರ್ಷಗಳಾಗಿವೆ. ಟರ್ಕಿಶ್ಗ್ರ್ಯಾನ್‌ಪ್ರಿಯ ಪ್ರಶಸ್ತಿ ಗೆಲ್ಲುವ ಮೂಲಕ ಅವರು ವೃತ್ತಿಜೀನವನದಲ್ಲಿ ಒಟ್ಟು 94 ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು. ಗೆಲುವು ಸಾಧಿಸಿದ ನಂತರ ಮಾತನಾಡಿದ ಅವರು ‘ಇದು ಆರಂಭವಷ್ಟೇ, ಇನ್ನಷ್ಟು ಸಾಧನೆಗಳನ್ನು ಮಾಡುವುದು ಉಳಿದಿದೆ‘ ಎಂದು ಹೇಳುವ ಮೂಲಕ ಪ್ರತಿಸ್ಪರ್ಧಿಗಳಿಗೆ ಸ್ಪಷ್ಟ ಸಂದೇಶ ನೀಡಿದರು.

ತಮ್ಮದೇ ತಂಡದ ಸದಸ್ಯ ವಾಲ್ಟರಿ ಬೊತಾಸ್ ಅವರಿಂದ ಹ್ಯಾಮಿಲ್ಟನ್‌ಗೆ ಆರಂಭದಲ್ಲಿ ಪ್ರಬಲ ಸ್ಪರ್ಧೆ ಎದುರಾಗಿತ್ತು. ಆದರೆ ಅಂತಿಮ ಹಂತದಲ್ಲಿ ಅಮೋಘ ಸಾಮರ್ಥ್ಯ ಮೆರೆದ ಹ್ಯಾಮಿಲ್ಟನ್ ಮುನ್ನುಗ್ಗಿದರು. ಸರ್ಜಿಯೊ ಪೆರೆಜ್ ಅವರಿಗಿಂತ ಅರ್ಧ ನಿಮಿಷ ಮೊದಲೇ ರೇಸ್ ಪೂರ್ಣಗೊಳಿಸಿದರು. ಬೊತಾಸ್ 14ನೇ ಸ್ಥಾನ ಗಳಿಸಿದರು.

ಹ್ಯಾಮಿಲ್ಟನ್ ಅವರ ಸಾಂಪ್ರದಾಯಿಕ ಪ್ರತಿಸ್ಪರ್ಧಿ ಹಾಗೂ ನಾಲ್ಕು ಬಾರಿಯ ವಿಶ್ವ ಚಾಂಪಿಯನ್, ಫೆರಾರಿ ಚಾಲಕ ಸೆಬಾಸ್ಟಿಯನ್ ವೆಟೆಲ್ ಮೂರನೇ ಸ್ಥಾನ ಗಳಿಸಿದರು. ಚಾರ್ಲ್ಸ್‌ ಲೆಕ್ಲೆರ್ಕ್‌, ಕಾರ್ಲೋಸ್ ಸೇನ್ಸ್ ಮತ್ತು ಮ್ಯಾಕ್ಸ್‌ ವೆರ್‌ಸ್ಟಾಪನ್ ಅವರೂ ಪ್ರಶಸ್ತಿಗಾಗಿ ಭಾರಿ ಪೈಪೋಟಿ ನಡೆಸಿದರು. 2008ರಲ್ಲಿ ಮೊದಲ ಪ್ರಶಸ್ತಿ ಗೆದ್ದ ಹ್ಯಾಮಿಲ್ಟನ್ ಒಟ್ಟಾರೆ ಅತಿ ಹೆಚ್ಚು ಪ್ರಶಸ್ತಿ ಗೆದ್ದ ದಾಖಲೆಯನ್ನು ಈಗಾಗಲೇ ತಮ್ಮದಾಗಿಸಿಕೊಂಡಿದ್ದಾರೆ. ಅತಿ ಹೆಚ್ಚು ಬಾರಿ (97) ಅಗ್ರ ಸ್ಥಾನಗಳಲ್ಲಿ ಕಾಣಿಸಿಕೊಂಡ ದಾಖಲೆ, ಅತಿ ಹೆಚ್ಚು ಬಾರಿ ಪೋಡಿಯಂ ಫಿನಿಷ್ (163) ಮಾಡಿದ ದಾಖಲೆ, ಸತತವಾಗಿ ಅತಿ ಹೆಚ್ಚು ಪಾಯಿಂಟ್ ಕಲೆ ಹಾಕಿದ (47) ದಾಖಲೆಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT