ಚೆನ್ನೈ: ಸಾಧಾರಣ ಸಾಮರ್ಥ್ಯ ತೋರಿದ ಭಾರತದ ಗ್ರ್ಯಾಂಡ್‌ಮಾಸ್ಟರ್ ಪೆಂಟಾಲ ಹರಿಕೃಷ್ಣ ಅವರು ಸೇಂಟ್ ಲೂಯಿಸ್ ಆನ್‌ಲೈನ್ ಚೆಸ್ ಟೂರ್ನಿಯಲ್ಲಿ ಏಳನೇ ಸ್ಥಾನ ಗಳಿಸಿದರು. ಬ್ಲಿಟ್ಞ್ 2 ವಿಭಾಗದಲ್ಲಿ ಅವರು ಕೇವಲ ಮೂರು ಪಾಯಿಂಟ್ಸ್ ಕಲೆಹಾಕಿದರು.

ವಿಶ್ವ ಚಾಂಪಿಯನ್, ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಹಾಗೂ ಅಮೆರಿಕದ ವೆಸ್ಲಿ ಸೋ ಅವರು ಟೂರ್ನಿಯ ಜಂಟಿ ವಿಜೇತರಾದರು.

ಟೂರ್ನಿಯ ಕೊನೆಯ ದಿನವಾದ ಶನಿವಾರ ಹರಿಕೃಷ್ಣ ಅವರಿಗೆ ಒಂದು ಸುತ್ತಿನಲ್ಲಿ ಮಾತ್ರ ಗೆಲುವು ಒಲಿಯಿತು. ಅಮೆರಿಕದ ಜೆಫರಿ ಕ್ಸಿಯಾಂಗ್ ಅವರನ್ನು ಹರಿಕೃಷ್ಣ ಪರಾಭವಗೊಳಿಸಿದರು. ಬಳಿಕ ನಾಲ್ಕು ಸುತ್ತುಗಳಲ್ಲಿ ಸೋಲು ಕಂಡ ಅವರು, ಮೂರು ಸುತ್ತುಗಳಲ್ಲಿ ಡ್ರಾ ಸಾಧಿಸಿದರು. ಇದರೊಂದಿಗೆ ಟೂರ್ನಿಯಲ್ಲಿ ಕ್ಸಿಯಾಂಗ್ ಅವರೊಂದಿಗೆ ಏಳನೇ ಸ್ಥಾನ ಹಂಚಿಕೊಂಡರು.

ಭಾರತದ ಎರಡನೇ ಕ್ರಮಾಂಕದ ಆಟಗಾರ ಹರಿಕೃಷ್ಣ, ಬ್ಲಿಟ್ಜ್ 1 ವಿಭಾಗದಲ್ಲಿ ಕಾರ್ಲ್‌ಸನ್ ಅವರಿಗೆ ಆಘಾತ ನೀಡಿದ್ದರು. ಆದರೆ ಬ್ಲಿಟ್ಜ್ 2 ವಿಭಾಗದಲ್ಲಿ ಕಾರ್ಲ್‌ಸನ್ ಸೇಡು ತೀರಿಸಿಕೊಂಡರು. ಆರನೇ ಸುತ್ತಿನ ಪಂದ್ಯದಲ್ಲಿ 47 ನಡೆಗಳಲ್ಲಿ ಹರಿಕೃಷ್ಣ ಅವರನ್ನು ಮಣಿಸಿದರು.

ರ‍್ಯಾಪಿಡ್ ವಿಭಾಗದಲ್ಲಿ ಉತ್ತಮ ಆಟವಾಡಿದ್ದ ಹರಿಕೃಷ್ಣ, ಬ್ಲಿಟ್ಜ್‌ನಲ್ಲಿ ಲಯ ಕಳೆದುಕೊಂಡರು.

ಟೂರ್ನಿಯಲ್ಲಿ ಜಂಟಿ ಪ್ರಶಸ್ತಿ ವಿಜೇತರಾದ ಕಾರ್ಲ್‌ಸನ್ ಹಾಗೂ ಸೋ ತಲಾ ₹ 33 ಲಕ್ಷ ತಮ್ಮದಾಗಿಸಿಕೊಂಡರು. ಮೂರನೇ ಸ್ಥಾನ ಗಳಿಸಿದ ಅಮೆರಿಕದ ಹಿಕಾರು ನಕಮುರ ₹ 27 ಲಕ್ಷ ಹಾಗೂ ಏಳನೇ ಸ್ಥಾನ ಪಡೆದ ಹರಿಕೃಷ್ಣ ₹ 10 ಲಕ್ಷ ಜೇಬಿಗಿಳಿಸಿದರು.

ಅಮೆರಿಕ ಮೂಲದ ಸೇಂಟ್ ಲೂಯಿಸ್ ಚೆಸ್ ಕ್ಲಬ್ ಈ ಟೂರ್ನಿಯನ್ನು ಆಯೋಜಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.