ಶನಿವಾರ, ಅಕ್ಟೋಬರ್ 8, 2022
21 °C

ಎಫ್‌ಐಎಚ್‌ ವಾರ್ಷಿಕ ಪ್ರಶಸ್ತಿ: ಹರ್ಮನ್‌ಪ್ರೀತ್ ಸಿಂಗ್‌ ನಾಮನಿರ್ದೇಶನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಾಸನ್‌: ಭಾರತ ಪುರುಷರ ಹಾಕಿ ತಂಡದ ಡ್ರ್ಯಾಗ್‌ಫ್ಲಿಕರ್ ಹರ್ಮನ್‌ಪ್ರೀತ್ ಸಿಂಗ್‌ ಅವರು ‘ಎಫ್‌ಐಎಚ್‌ ಹಾಕಿ ಸ್ಟಾರ್ಸ್’ ವಾರ್ಷಿಕ ಪ್ರಶಸ್ತಿಗೆ ಮಂಗಳವಾರ ನಾಮನಿರ್ದೇಶನಗೊಂಡಿದ್ದಾರೆ.

ಹರ್ಮನ್‌ಪ್ರೀತ್ ಅವರನ್ನು ಶ್ರೇಷ್ಠ ಆಟಗಾರ ಪ್ರಶಸ್ತಿಗೆ, ಪಿ.ಆರ್‌. ಶ್ರೀಜೇಶ್‌ ಮತ್ತು ಸವಿತಾ ಪೂನಿಯಾ ಅವರನ್ನು ಕ್ರಮವಾಗಿ ಅತ್ಯುತ್ತಮ ಪುರುಷರ ಮತ್ತು ಮಹಿಳಾ ಗೋಲ್‌ಕೀಪರ್ಸ್ ವಿಭಾಗಗಳಿಗೆ ನಾಮನಿರ್ದೇಶನ ಮಾಡಲಾಗಿದೆ.

ಭಾರತದ ಪುರುಷ ಮತ್ತು ಮಹಿಳಾ ಹಾಕಿ ತಂಡಗಳ ಕೋಚ್‌ಗಳಾದ ಗ್ರಹಾಂ ರೀಡ್‌ ಮತ್ತು ಜಾನೆಕ್‌ ಶಾಪ್‌ಮನ್ ಅವರನ್ನು ಅತ್ಯುತ್ತಮ ತರಬೇತುದಾರರ ವಿಭಾಗಕ್ಕೆ ನಾಮನಿರ್ದೇಶನ ಮಾಡಲಾಗಿದೆ.

ಅಕ್ಟೋಬರ್‌ ಮೊದಲ ವಾರದಲ್ಲಿ ಪ್ರಶಸ್ತಿ ವಿಜೇತರ ಹೆಸರುಗಳನ್ನು ಪ್ರಕಟಿಸಲಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು