ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಅಥ್ಲೆಟಿಕ್‌ ಕೂಟ: ಹಿಮಾ ದಾಸ್‌, ಅನಾಸ್‌ಗೆ ಚಿನ್ನ

Last Updated 8 ಜುಲೈ 2019, 20:01 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಹಿಮಾ ದಾಸ್‌ ಅವರು ಪೋಲೆಂಡ್‌ನಲ್ಲಿ ನಡೆದ ಕಟ್ನೊ ಅಥ್ಲೆಟಿಕ್ಸ್ ಕೂಟದಲ್ಲಿ ಭಾನುವಾರ ಚಿನ್ನದ ಪದಕ ಬಾಚಿಕೊಂಡರು. 200 ಮೀಟರ್ಸ್‌ ಓಟದಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಅವರು, ಈ ವಾರದಲ್ಲಿ ಎರಡನೇ ಅಂತರರಾಷ್ಟ್ರೀಯ ಸ್ವರ್ಣ ಪಡೆದರು.

200 ಮೀಟರ್ಸ್ ಓಟದಲ್ಲಿ 23.97 ಸೆಕೆಂಡ್‌ಗಳಲ್ಲಿ ಅವರು ಗುರಿ ತಲುಪಿದರು. ಭಾರತದವರೇ ಆದ ವಿ.ಕೆ.ವಿಸ್ಮಯಾ (24.06 ಸೆಕೆಂಡ್‌) ಬೆಳ್ಳಿ ಪದಕ ಗೆದ್ದರು.

ರಾಷ್ಟ್ರೀಯ ದಾಖಲೆ ಬರೆದಿರುವ ಭಾರತದ ಮಹಮ್ಮದ್‌ ಅನಾಸ್‌ ಕೂಡ ಪುರುಷರ 200 ಮೀ. ಓಟದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. 21.18 ಸೆಕೆಂಡ್‌ಗಳಲ್ಲಿ ಅವರು ಗುರಿ ಮುಟ್ಟಿದರು.

ಈ ವರ್ಷದಲ್ಲಿ ಹಿಮಾ ಅವರು ಭಾಗವಹಿಸಿದ 200 ಮೀ. ಓಟದಎರಡನೇ ಸ್ಪರ್ಧೆ ಇದು. ಹೋದ ಮಂಗಳವಾರ (ಜುಲೈ 2) ಪೋಲೆಂಡ್‌ನಲ್ಲಿ ನಡೆದ ಪೊಜ್ನಾನ್‌ ಅಥ್ಲೆಟಿಕ್ಸ್ ಗ್ರ್ಯಾನ್‌ಪ್ರೀ ಟೂರ್ನಿಯಲ್ಲಿ ಅವರು ಚಿನ್ನದ ಪದಕ ಜಯಿಸಿದ್ದರು. ಆ ಟೂರ್ನಿಯಲ್ಲಿ ವಿಸ್ಮಯಾ ಅವರಿಗೆ ಕಂಚಿದ ಪದಕ ದಕ್ಕಿತ್ತು.

ಹಿಮಾ ಅವರು ಹೋದ ವರ್ಷ 23.10 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ವೈಯಕ್ತಿಕ ಶ್ರೇಷ್ಠ ದಾಖಲೆ ನಿರ್ಮಿಸಿದ್ದರು. 400 ಮೀ. ಓಟದಲ್ಲಿ ಅವರು ಸದ್ಯದ ವಿಶ್ವ ಜೂನಿಯರ್‌ ಚಾಂಪಿಯನ್‌. ರಾಷ್ಟ್ರೀಯ ದಾಖಲೆ ಕೂಡ ಅವರ ಹೆಸರಲ್ಲಿದೆ.

400 ಮೀ. ಹರ್ಡಲ್ಸ್‌ನಲ್ಲಿ ಭಾರತದ ಎಂ.ಪಿ.ಜಬೀರ್‌ (50.21 ಸೆಕೆಂಡ್‌) ಚಿನ್ನದ ಪದಕ ಗೆದ್ದುಕೊಂಡರು. ಜಿತಿನ್‌ ಪಾಲ್‌(52.26 ಸೆಕೆಂಡ್‌) ಅವರಿಗೆ ಮೂರನೇ ಸ್ಥಾನ ಒಲಿಯಿತು. ಮಹಿಳೆಯರ 400 ಮೀ. ಓಟದಲ್ಲಿಭಾರತದ ಪಿ. ಸರಿತಾಬೆನ್‌ (52.77 ಸೆಕೆಂಡ್‌), ಸೋನಿಯಾ ಬೈಷ್ಯಾ (53.73 ಸೆಕೆಂಡ್‌ಗಳು) ಹಾಗೂ ಆರ್‌.ವಿಧಿಯಾ (53.73 ಸೆಕೆಂಡ್‌) ಅವರನ್ನೊಳಗೊಂಡ ತಂಡ ಪ್ರಥಮ ಸ್ಥಾನ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT