ಬುಧವಾರ, ಆಗಸ್ಟ್ 4, 2021
22 °C

ದ್ರೋಣಾಚಾರ್ಯ ಪ್ರಶಸ್ತಿಗೆ ರಮೇಶ್ ಅರ್ಜಿ

ಪಿಟಿಐ Updated:

ಅಕ್ಷರ ಗಾತ್ರ : | |

ರಮೇಶ್ ಪರಮೇಶ್ವರನ್

ಬೆಂಗಳೂರು: ಭಾರತ ಹಾಕಿ ತಂಡದ ಮಾಜಿ ಸಹಾಯಕ ಕೋಚ್ ರಮೇಶ್ ಪರಮೇಶ್ವರನ್ ಅವರು ದ್ರೋಣಾಚಾರ್ಯ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದಾರೆ.

ಹಾಕಿ ಇಂಡಿಯಾ ಈಗಾಗಲೇ ಬಿ.ಜೆ. ಕಾರಿಯಪ್ಪಮತ್ತು ರೊಮೇಶ್ ಪಠಾಣಿಯಾ ಅವರ ಹೆಸರುಗಳನ್ನು ಶಿಫಾರಸು ಮಾಡಿದೆ. ಆದ್ದರಿಂದ ರಮೇಶ್ ಅವರು ಹಾಕಿ ಕರ್ನಾಟಕ ಮುಖಾಂತರ ಅರ್ಜಿ ಸಲ್ಲಿಸಿದ್ದಾರೆ. 

‘ಜೂನಿಯರ್ ಹಂತದ ಆಟಗಾರನಾಗಿ ಬೆಳೆದು ರಾಷ್ಟ್ರೀಯ ತಂಡದ ಕೋಚ್‌ ಆಗಿ ಸೇವೆ ಸಲ್ಲಿಸಿದ ತೃಪ್ತಿಯಿದೆ. ನನ್ನ ಅನುಭವ, ವೃತ್ತಿಜೀವನದ ಏರಿಳಿತಗಳು, ಗೆಲುವು. ಸೋಲುಗಳನ್ನು ಸಮಗ್ರವಾಗಿ ಕಿರಿಯರೊಂದಿಗೆ ಹಂಚಿಕೊಂಡಿದ್ದೇನೆ. ನನ್ನ ಜೀವನದ ಬಹುಪಾಲು ಸಮಯ, ಧನ ಮತ್ತು ಶಕ್ತಿಯನ್ನು ವಿನಿಯೋಗಿಸಿದ್ದೇನೆ’ ಎಂದು ರಮೇಶ್ ಹೇಳಿದ್ದಾರೆ.

ಅವರು 2015ರಿಂದ ಕರ್ನಾಟಕ ಹಾಕಿ ಅಕಾಡೆಮಿಯ ಪ್ರತಿಭಾಶೋಧದ ಹೊಣೆ ನಿಭಾಯಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು