ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ 8ರಿಂದ ಹಾಕಿ ತರಬೇತಿ ಶಿಬಿರ

33 ಮಂದಿ ಸಂಭಾವ್ಯ ಜೂನಿಯರ್‌ ಆಟಗಾರ್ತಿಯರ ಆಯ್ಕೆ
Last Updated 5 ಜುಲೈ 2019, 20:01 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರಿನಲ್ಲಿ ಜುಲೈ 8ರಿಂದ ಜೂನಿಯರ್‌ ಬಾಲಕಿಯರ ಹಾಕಿ ತರಬೇತಿ ಶಿಬಿರ ನಡೆಯಲಿದೆ. ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ಕೇಂದ್ರದಲ್ಲಿ ನಡೆಯುವ ಶಿಬಿರಕ್ಕೆ 33 ಮಂದಿ ಸಂಭಾವ್ಯರನ್ನು ಹಾಕಿ ಇಂಡಿಯಾ ಶುಕ್ರವಾರ ಹೆಸರಿಸಿದೆ.

ಶಿಬಿರ ಆಗಸ್ಟ್‌ 3ರಂದು ಮುಕ್ತಾಯಗೊಳ್ಳಲಿದ್ದು, ಕೋಚ್‌ ಬಲ್ಜೀತ್‌ ಸಿಂಗ್‌ ಸೈನಿಮೇಲುಸ್ತುವಾರಿ ವಹಿಸಲಿರುವರು.

ಮಹತ್ವದ ಐರ್ಲೆಂಡ್‌ ಪ್ರವಾಸದಲ್ಲಿ ಆತಿಥೇಯ ಐರ್ಲೆಂಡ್‌, ಕೆನಡಾ ಹಾಗೂ ಸ್ಕಾಟ್ಲೆಂಡ್‌ ತಂಡಗಳನ್ನು ಎದುರಿಸಿ ಭಾರತ ಜೂನಿಯರ್‌ ತಂಡ, ಕ್ಯಾಂಟರ್‌ ಫಿಜ್‌ಗೆರಾಲ್ಡ್‌ ಟ್ರೋಫಿಯನ್ನು ಗೆದ್ದುಕೊಡಿತ್ತು.

ಬೆಲಾರಸ್‌ಗೆ ತೆರಳಿದ್ದ ತಂಡ ಅಲ್ಲಿನ ಜೂನಿಯರ್‌ ತಂಡವನ್ನೂ ಮಣಿಸಿ ಉತ್ತಮ ಸಾಧನೆ ಮಾಡಿತ್ತು.

‘ಐರ್ಲೆಂಡ್‌ ಹಾಗೂ ಬೆಲಾರಸ್‌ ಪ್ರವಾಸ ನಮ್ಮ ತಂಡಕ್ಕೆ ಉತ್ತೇಜನ ನೀಡಿ, ವಿಶ್ವದ ಅತ್ಯುತ್ತಮ ಜೂನಿಯರ್‌ ತಂಡವನ್ನಾಗಿಸಲು ಸಹಕಾರಿಯಾಗಿದೆ. ನಾವು ಸರಿಯಾದ ಮಾರ್ಗದಲ್ಲಿಕೆಲಸ ಮಾಡಲು ತರಬೇತಿ ಶಿಬಿರವು ಒಂದು ಉತ್ತಮ ಅವಕಾಶವಾಗಿದೆ’ ಎಂದು ಕೋಚ್‌ ಸೈನಿ ಅಭಿಪ್ರಾಯಪಟ್ಟರು.

ಸಂಭಾವ್ಯ ಆಟಗಾರ್ತಿಯರು

ಗೋಲ್‌ಕೀಪರ್ಸ್‌: ರಾಷನ್‌ಪ್ರೀತ್‌ ಕೌರ್‌, ಕುಷ್ಬೂ, ಎಫ್‌. ರಮೆಂಗ್‌ಮಾವಿ

ಡಿಫೆಂಡರ್ಸ್: ಪ್ರಿಯಾಂಕಾ, ಸಿಮ್ರನ್‌ ಸಿಂಗ್‌, ಮರೀನಾ ಲಾಲ್‌ರಾಮ್‌ಂಗಾಕಿ, ಗಗನ್‌ದೀಪ್‌ ಕೌರ್‌, ಇಷಿಕಾ ಚೌಧರಿ, ಜ್ಯೋತಿಕಾ ಕಲ್ಸಿ, ಸುಮಿತಾ, ಅಕ್ಷತಾ ಧೆಕಾಲೆ, ಉಷಾ, ಪ್ರಣೀತ್‌ ಕೌರ್‌.

ಮಿಡ್‌ಫಿಲ್ಡರ್ಸ್: ಬಲ್ಜೀತ್‌ ಕೌರ್, ಮರಿಯಾನಾ ಕುಜೂರ್‌, ಕಿರಣ್‌, ಪ್ರಭಲೀನ್‌ ಕೌರ್‌, ಪ್ರೀತಿ, ಅಜ್ಮಿನಾ ಕುಜುರ್‌, ವೈಷ್ಣವಿ ಫಾಲ್ಕೆ, ಕವಿತಾ ಬಾಗ್ದಿ, ಬಲ್ಜಿಂದರ್‌ ಕೌರ್‌, ಸುಷ್ಮಾ ಕುಮಾರಿ.

ಫಾವಡ್ಸ್: ಮುಮ್ತಾಜ್‌ ಖಾನ್‌, ಬ್ಯೂಟಿ ಡಂಗ್‌ಡಂಗ್‌, ಗುರ್ಮಾಯಿಲ್‌ ಕೌರ್‌, ದೀಪಿಕಾ, ಲಾಲ್‌ರಿಂದಿಂಕಿ, ಜೀವನ್‌ ಕಿಶೋರಿ ಟೊಪ್ಪೊ, ರುತುಜಾ ಪಿಸಾಲ್‌, ಸಂಗೀತಾ ಕುಮಾರಿ, ಯೋಗಿತಾ ಬೋರಾ, ಅನ್ನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT