ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ರಾಷ್ಟ್ರೀಯ ಶಿಬಿರಕ್ಕೆ 32 ಸದಸ್ಯರ ತಂಡ ಪ್ರಕಟ

Last Updated 26 ಜನವರಿ 2020, 10:43 IST
ಅಕ್ಷರ ಗಾತ್ರ

ನವದೆಹಲಿ: ಮುಂದಿನ ತಿಂಗಳು ತವರಿನಲ್ಲಿ ನಡೆಯುವ ವಿಶ್ವ ಚಾಂಪಿಯನ್‌ ಬೆಲ್ಜಿಯಂ ಎದುರಿನ ಎಫ್‌ಐಎಚ್‌ ಪ್ರೊ ಲೀಗ್‌ ಪಂದ್ಯಕ್ಕೆ ಪೂರ್ವಭಾವಿ ಸಿದ್ಧತೆ ಕೈಗೊಳ್ಳುವ ಸಲುವಾಗಿ ಆಯೋಜಿಸಿರುವ ರಾಷ್ಟ್ರೀಯ ಶಿಬಿರಕ್ಕೆ ಶನಿವಾರ ಭಾರತದ ಪುರುಷರ ಹಾಕಿ ತಂಡವನ್ನು ಪ್ರಕಟಿಸಲಾಗಿದೆ.

ಹಾಕಿ ಇಂಡಿಯಾ (ಎಚ್‌ಐ) ಬಿಡುಗಡೆ ಮಾಡಿರುವ 32 ಸದಸ್ಯರ ತಂಡದಲ್ಲಿ ಡ್ರ್ಯಾಗ್‌ಫ್ಲಿಕ್ಕರ್‌ ವರುಣ್‌ ಕುಮಾರ್‌ ಅವಕಾಶ ಪಡೆದಿದ್ದಾರೆ. ಗಾಯದ ಕಾರಣ ಅವರು ನೆದರ್ಲೆಂಡ್ಸ್‌ ಎದುರಿನ ಎರಡು ಪಂದ್ಯಗಳಲ್ಲಿ ಆಡಿರಲಿಲ್ಲ.

ಭಾರತ ಮತ್ತು ಬೆಲ್ಜಿಯಂ ನಡುವಣ ಪಂದ್ಯಗಳು ಫೆಬ್ರುವರಿ 8 ಮತ್ತು 9ರಂದು ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಿಗದಿಯಾಗಿವೆ. ಹೀಗಾಗಿ ಭುವನೇಶ್ವರದಲ್ಲೇ ಶಿಬಿರ ಆಯೋಜಿಸಲಾಗಿದೆ. ಕನ್ನಡಿಗ ಎಸ್‌.ವಿ.ಸುನಿಲ್‌ ಅವರೂ ತಂಡದಲ್ಲಿದ್ದಾರೆ.

ತಂಡ ಇಂತಿದೆ: ಪಿ.ಆರ್.ಶ್ರೀಜೇಶ್‌, ಕೃಷ್ಣ ಬಹದ್ದೂರ್ ಪಾಠಕ್‌ ಮತ್ತು ಸೂರಜ್‌ ಕರ್ಕೆರಾ (ಮೂವರೂ ಗೋಲ್‌ಕೀಪರ್‌ಗಳು). ಹರ್ಮನ್‌ಪ್ರೀತ್‌ ಸಿಂಗ್‌, ಸುರೇಂದರ್‌ ಕುಮಾರ್‌, ಬೀರೇಂದ್ರ ಲಾಕ್ರಾ, ರೂಪಿಂದರ್‌ ಪಾಲ್‌ ಸಿಂಗ್‌, ಗುರಿಂದರ್‌ ಸಿಂಗ್‌, ಅಮಿತ್‌ ರೋಹಿದಾಸ್‌, ಕೊಥಾಜಿತ್‌ ಸಿಂಗ್‌, ಮನಪ್ರೀತ್‌ ಸಿಂಗ್‌, ಹಾರ್ದಿಕ್‌ ಸಿಂಗ್‌, ನೀಲಕಂಠ ಶರ್ಮಾ, ವಿವೇಕ್‌ ಸಾಗರ್‌ ಪ್ರಸಾದ್‌, ಚಿಂಗ್ಲೆನ್‌ಸನಾ ಸಿಂಗ್‌, ದಿಲ್‌ಪ್ರೀತ್ ಸಿಂಗ್‌, ರಾಜಕುಮಾರ್‌ ಪಾಲ್‌, ನೀಲಂ ಸಂಜೀಪ್‌, ದಿಪ್ಸನ್‌ ಟರ್ಕಿ, ಎಸ್‌.ವಿ.ಸುನಿಲ್‌, ಆಕಾಶ್‌ದೀಪ್‌ ಸಿಂಗ್‌, ರಮಣದೀಪ್‌ ಸಿಂಗ್‌, ಸಿಮ್ರನ್‌ಜೀತ್ ಸಿಂಗ್‌, ಮನದೀಪ್‌ ಸಿಂಗ್‌, ಲಲಿತ್‌ಕುಮಾರ್ ಉಪಾಧ್ಯಾಯ, ಗುರುಸಾಹೀಬ್‌ಜಿತ್‌ ಸಿಂಗ್‌, ಶಂಷೇರ್‌ ಸಿಂಗ್‌, ಜರ್ಮನ್‌ಪ್ರೀತ್‌ ಸಿಂಗ್‌, ಜಸ್‌ಕರಣ್ ಸಿಂಗ್‌, ಗುರ್ಜಂತ್‌ ಸಿಂಗ್‌, ವರುಣ್‌ ಕುಮಾರ್‌ ಮತ್ತು ಸುಮಿತ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT