ಭಾನುವಾರ, ಜನವರಿ 19, 2020
26 °C
ಪಿಎಸ್‌ಪಿಬಿ ಅಂತರ ಘಟಕ ಹಾಕಿ ಟೂರ್ನಿ

ಹಾಕಿ ಟೂರ್ನಿ: ಐಒಸಿಎಲ್‌ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ತಲ್ವಿಂದರ್‌ ಸಿಂಗ್‌ ಗಳಿಸಿದ ಎರಡು ಗೋಲುಗಳು ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಐಒಸಿಎಲ್‌) ತಂಡಕ್ಕೆ ಜಯ ತಂದುಕೊಟ್ಟವು. ಇಲ್ಲಿನ ಕರ್ನಾಟಕ ರಾಜ್ಯ ಹಾಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪೆಟ್ರೋಲಿಯಂ ಸ್ಪೋರ್ಟ್ಸ್ ಪ್ರೊಮೊಷನ್‌ ಬೋರ್ಡ್‌ (ಪಿಎಸ್‌ಪಿಬಿ) ಅಂತರ ಘಟಕ ಹಾಕಿ ಟೂರ್ನಿಯ ಪಂದ್ಯದಲ್ಲಿ ಐಒಸಿಎಲ್‌ ತಂಡವು 7–2ರಿಂದ ಒಎನ್‌ಜಿಸಿ ತಂಡವನ್ನು ಸೋಲಿಸಿತು.

ಐಒಸಿಎಲ್‌ ಪರ ಗುರ್ಜಿಂದರ್‌ ಸಿಂಗ್ (6ನೇ ನಿಮಿಷ), ತಲ್ವಿಂದರ್‌ ಸಿಂಗ್‌ (15 ಹಾಗೂ 20ನೇ ನಿಮಿಷ), ಅರ್ಮಾನ್‌ ಖುರೇಷಿ (17ನೇ ನಿಮಿಷ), ದಿಲ್‌ಪ್ರೀತ್‌ ಸಿಂಗ್‌ (33ನೇ ನಿಮಿಷ), ವಿಕ್ರಂ ಕಾಂತ್‌ (37ನೇ ನಿಮಿಷ) ಮತ್ತು ಸಿಮ್ರನ್‌ಜೀತ್‌ ಸಿಂಗ್‌ (55ನೇ ನಿಮಿಷ) ಗೋಲು ಹೊಡೆದರು.

ಒಎನ್‌ಜಿಸಿ ತಂಡದ ಸಂಜಯ್‌ 49ನೇ ನಿಮಿಷ ಹಾಗೂ ದಿವಾಕರ್‌ ರಾಮ್‌ 60ನೇ ನಿಮಿಷಗಳಲ್ಲಿ ಯಶಸ್ಸು ಕಂಡರು.

ಇನ್ನೊಂದು ಪಂದ್ಯದಲ್ಲಿ ಬಿಪಿಸಿಎಲ್‌ ತಂಡವು ಜಿಎಐಎಲ್‌ ಎದುರು 3–1 ಅಂತರದಿಂದ ಗೆದ್ದಿತು. ಬಿಪಿಸಿಎಲ್‌ ತಂಡದ ಸುದೀಪ್‌ ಚಿರ್ಮಾಕೊ (2ನೇ ನಿಮಿಷ), ಹರ್ಜಿತ್‌ ಸಿಂಗ್‌ (6ನೇ ನಿಮಿಷ) ಹಾಗೂ ದರ್ಶನ್‌ ಗಾವಕರ್‌ (28ನೇ ನಿಮಿಷ) ತಲಾ ಒಂದು ಗೋಲು ದಾಖಲಿಸಿದರು.

ಜಿಎಐಎಲ್‌ ತಂಡದ ಪರಶುರಾಮ ಚೌರಾಸಿಯಾ 57ನೇ ನಿಮಿಷ ಗೋಲು ಗಳಿಸಿದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು