ಸೋಮವಾರ, ಸೆಪ್ಟೆಂಬರ್ 20, 2021
29 °C

ಅಕ್ಟೋಬರ್ 9ರಿಂದ 17ರವರೆಗೆ ಥಾಮಸ್ ಮತ್ತು ಊಬರ್ ಕಪ್ ಬ್ಯಾಡ್ಮಿಂಟನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): ಡೆನ್ಮಾರ್ಕಿನ ಆರ್‌ಹಾಸ್‌ನಲ್ಲಿ ಅಕ್ಟೋಬರ್‌ನಲ್ಲಿ ನಡೆಯಲಿರುವ ಥಾಮಸ್ ಮತ್ತು ಊಬರ್ ಕಪ್ ಬ್ಯಾಡ್ಮಿಂಟನ್ ಫೈನಲ್‌ನಲ್ಲಿ ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಕಣಕ್ಕಿಳಿಯಲಿವೆ.

ಪುರುಷರ ವಿಭಾಗದಲ್ಲಿ ಸಿ ಗುಂಪಿನಲ್ಲಿ ಭಾರತ ತಂಡಕ್ಕೆ ಹಾಲಿ ಚಾಂಪಿಯನ್ ಚೀನಾ, ನೆದರ್ಲೆಂಡ್ಸ್‌ ಮತ್ತು ತಾಹಿತಿ ತಂಡಗಳ ಸವಾಲು ಎದುರಾಗಲಿದೆ.

ಮಹಿಳೆಯರ ಬಿ ಗುಂಪಿನಲ್ಲಿ ಭಾರತ ತಂಡವು ಹೋದ ಸಲದ ರನ್ನರ್ಸ್ ಅಪ್ ಥಾಯ್ಲೆಂಡ್, ಸ್ಪೇನ್ ಮತ್ತು ಸ್ಕಾಟ್ಲೆಂಡ್ ತಂಡಗಳ ಸವಾಲು ಎದುರಿಸಲಿದೆ.

ಕೌಲಾಲಂಪುರದಲ್ಲಿರುವ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ (ಬಿಡಬ್ಲ್ಯುಎಫ್‌)  ಆಡಳಿತ ಕಚೇರಿಯಲ್ಲಿ ಡ್ರಾ ಬಿಡುಗಡೆ ನಡೆಯಿತು.

ಲೀಗ್ ಹಂತದಲ್ಲಿ ಪ್ರತಿ ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಗಳಿಸುವ ತಂಡಗಳು ನಾಕ್‌ಔಟ್ ಸುತ್ತಿಗೆ ಪ್ರವೇಶ ಪಡೆಯಲಿವೆ.

2018ರಲ್ಲಿ ಭಾರತ ತಂಡಗಳು ಎಂಟರ ಘಟ್ಟಕ್ಕೆ ತಲುಪುವಲ್ಲಿ ವಿಫಲವಾಗಿದ್ದವು.

13 ಬಾರಿ ಪ್ರಶಸ್ತಿ ಗೆದ್ದು ದಾಖಲೆ ಮಾಡಿರುವ ಇಂಡೋನೆಷ್ಯಾ ತಂಡವು ಎ ಗುಂಪಿನಲ್ಲಿ ಆಡಲಿದೆ. ತೈಪೆ, ಅಲ್ಜಿರಿಯಾ   ತಂಡಗಳು ಇದೇ ಗುಂಪಿನಲ್ಲಿವೆ.

ಈ ಟೂರ್ನಿಯು ಹೋದ ಸೆಪ್ಟೆಂಬರ್‌ ನಲ್ಲಿ ನಡೆಯಬೇಕಿತ್ತು. ಆದರೆ, ಕೋವಿಡ್ ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ ಇಂಡೋನೆಷ್ಯಾ, ದಕ್ಷಿಣ ಕೊರಿಯಾ, ಥಾಯ್ಲೆಂಡ್ ಮತ್ತು ತೈಪೆ ತಂಡಗಳು ಹಿಂದೆ ಸರಿದಿದ್ದವು. ಆದ್ದರಿಂದ ಟೂರ್ನಿಯನ್ನು ಮುಂದೂಡಲಾಗಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು