ಬುಧವಾರ, ಸೆಪ್ಟೆಂಬರ್ 22, 2021
22 °C

Tokyo Olympic| ಆರ್ಚರಿ: ಭಾರತಕ್ಕೆ ಮೊದಲ ದಿನವೇ ನಿರಾಸೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಭಾರತದ ಆರ್ಚರಿಪಟುಗಳು ಒಲಿಂಪಿಕ್ಸ್‌ನ ಮೊದಲ ದಿನವೇ ನೀರಸ ಪ್ರದರ್ಶನದೊಂದಿಗೆ ನಿರಾಸೆಗೆ ಒಳಗಾದರು. ಕೋವಿಡ್‌ನಿಂದಾಗಿ ಎಲ್ಲ ಅಂತರರಾಷ್ಟ್ರೀಯ ಸ್ಪರ್ಧೆಗಳಿಂದ ದೂರ ಉಳಿದಿದ್ದ ಕೊರಿಯಾ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡಿದರು. 

ವಿಶ್ವ ಕ್ರಮಾಂಕದಲ್ಲಿ ಒಂದನೇ ಸ್ಥಾನದಲ್ಲಿರುವ ದೀಪಿಕಾ ಕುಮಾರಿ ರ‍್ಯಾಂಕಿಂಗ್‌ ಹಂತದಲ್ಲಿ ನಿರೀಕ್ಷಿತ ಸಾಮರ್ಥ್ಯ ತೋರಲು ವಿಫಲರಾದರು. ಪುರುಷ ಆರ್ಚರ್‌ಗಳು ಪ್ರಯಾಸಪಟ್ಟು ಮುಂದಿನ ಹಂತಕ್ಕೆ ಪ್ರವೇಶ ಪಡೆದರು.

ಭಾರತದ ಅತನು ದಾಸ್, ಪ್ರವೀಣ್ ಜಾಧವ್ ಮತ್ತು ತರುಣದೀಪ್ ರಾಯ್‌ಗೆ ಹೆಚ್ಚು ಸ್ಕೋರ್‌ ಸಂಪಾದಿಸಲು ಆಗಲಿಲ್ಲ. ಆದರೂ ಅಗ್ರ 10ರಲ್ಲಿ ಸ್ಥಾನ ಗಳಿಸುವಲ್ಲಿ ಯಶಸ್ವಿಯಾದರು. ಮೊದಲಾರ್ಧದ ವೇಳೆ ನಾಲ್ಕನೇ ಸ್ಥಾನದಲ್ಲಿದ್ದ ದೀಪಿಕಾ ಕುಮಾರಿ 663 ಪಾಯಿಂಟ್‌ಗಳೊಂದಿಗೆ ಒಂಬತ್ತನೇ ಸ್ಥಾನಕ್ಕೆ ಕುಸಿದರು. 

ಇದೇ ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ಪ್ರವೀಣ್ ಜಾಧವ್ ಪುರುಷರ ವಿಭಾಗದಲ್ಲಿ ಇತರ ಇಬ್ಬರಿಗಿಂತ ಉತ್ತಮ ಸಾಧನೆ ಮಾಡಿದರು. ಅವರು 656 ಪಾಯಿಂಟ್ ಗಳಿಸಿದರೆ ಅತನು ದಾಸ್ 653 ಪಾಯಿಂಟ್ ಕಲೆ ಹಾಕಿದರು.

ಕೊರಿಯಾದ ಮಹಿಳಾ ಆರ್ಚರ್‌ಗಳ ಪೈಕಿ ಒಬ್ಬರು ಅಗ್ರ ಮೂರರಲ್ಲಿ ಸ್ಥಾನ ಗಳಿಸಿಕೊಂಡರೆ ಯುವ ಕ್ರೀಡಾಪಟು ಆ್ಯನ್ ಸಾನ್ ಅವರು 25 ವರ್ಷಗಳ ಒಲಿಂಪಿಕ್ ದಾಖಲೆ ಮುರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು