ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಫಿಂಗ್‌: ಕ್ವಾರ್ಟರ್‌ಫೈನಲ್‌ಗೆ ರಮೇಶ್, ಮಣಿ

ಹಿಟ್ಸ್‌ನಲ್ಲಿಯೇ ಪಚೈಗೆ ಆಘಾತ
Last Updated 27 ಮೇ 2022, 17:55 IST
ಅಕ್ಷರ ಗಾತ್ರ

ಮಂಗಳೂರು: ಆತಿಥೇಯ ಕರ್ನಾಟಕದ ರಮೇಶ್ ಬೂದಿಹಾಳ ಮತ್ತು ತಮಿಳುನಾಡಿದ ಡಿ. ಮಣಿಕಂದನ್ ಶುಕ್ರವಾರ ಇಲ್ಲಿ ಆರಂಭವಾದ ಇಂಡಿಯನ್ ಓಪನ್ ಸರ್ಫಿಂಗ್ ಚಾಂಪಿಯನ್‌ಷಿಪ್‌ನ ಮೂರನೇ ಆವೃತ್ತಿಯ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಗಿಟ್ಟಿಸಿದ್ದಾರೆ.

ಶನಿವಾರ ಇಲ್ಲಿ ನಡೆದ ಹೀಟ್ಸ್‌ನಲ್ಲಿ ತಮಿಳುನಾಡಿನ ಅಂತರ ರಾಷ್ಟ್ರೀಯ ಸರ್ಫರ್‌ ಸೇಕರ್‌ ಪಚೈ ನಿರಾಶೆ ಅನುಭವಿಸಿದರು. ಆದರೆ ಸ್ಟ್ಯಾಂಡ್‌ ಅಪ್‌ ಪೆಡಲಿಂಗ್‌ ವಿಭಾಗದಲ್ಲಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.

ಶುಕ್ರವಾರ ಒಟ್ಟು 8 ಹಿಟ್ಸ್‌ಗಳಾಗಿದ್ದು, 16 ಮಂದಿ ಸರ್ಫರ್‌ಗಳು ಕ್ವಾರ್ಟರ್‌ ಫೈನಲ್‌ಗೆ ಆಯ್ಕೆ ಆಗಿದ್ದಾರೆ.ಸೂರ್ಯ ಪಿ., ರಘುಲ್‌ ಜಿ., ಶ್ರೀಕಾಂತ್‌ ಡಿ., ಹರೀಶ್‌ ಎಂ., ವಿಘ್ನೇಶ್‌ ವಿ., ರುಬಾನ್‌ ವಿ., ಶಿವರಾಜ್‌ ಬಾಬು, ಮಣಿಕಂದನ್‌ ಎಂ., ಮಣಿವಣ್ಣನ್ ಟಿ., ರಮೇಶ್‌ ಬೂದಿಹಾಳ., ಸಂತೋಷನ್‌. ಹಾಗೂ ಸಂಜಯಕುಮಾರ್ ಎಸ್‌ ಆಯ್ಕೆಯಾಗಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT